Psalms 75:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನ ಕೈಯಲ್ಲಿ ಪಾತ್ರೆಯಿದೆ. ಆ ಪಾತ್ರೆಯು ವಿಷದ್ರಾಕ್ಷಾರಸದಿಂದ ತುಂಬಿದೆ. ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು; ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ಕೈಯಲ್ಲಿ ಪಾತ್ರೆ ಇದೆ; ಅದು ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ. ಅದರಿಂದ ಹೊಯ್ದು ಹಂಚುತ್ತಾನೆ. ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು.
Kannada BSI Bible 2016
ಕರ್ತನ ಕೈಯಲ್ಲಿ ಪಾತ್ರೆಯು ಉಂಟು; ದ್ರಾಕ್ಷಾರಸವು ಕೆಂಪಾಗಿದೆ. ಕಲಬೆರಿಕೆಯಿಂದ ತುಂಬಿ ಅದೆ; ಅದರಿಂದ ಆತನು ಹೊಯ್ಯುತ್ತಾನೆ; ಅದರ ಮಡ್ಡಿಯನ್ನು ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ಕೈಯಲ್ಲಿ ಪಾತ್ರೆಯದೆ; ಅದು ಔಷಧಿವಿುಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ. ಅದರಿಂದ ಹೊಯ್ದು ಹಂಚುತ್ತಾನೆ. ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು.
Kannada Bible (KNCL) BSI 2016
ಪ್ರಭುವಿನ ಕರಗಳಲ್ಲಿದೆ ಕೋಪಕೊಡ ಒಂದು I ತುಂಬಿದೆ ಅಮಲುಮಿಶ್ರ ರೌದ್ರರಸದಿಂದದು II ಅದನವನು ಸುರಿಯಲು ಕುಡಿವರು ಜಗದ ದುರುಳರು I ಮಡ್ಡಿಯನು ಕೂಡ ಬಿಡದೆ ಕುಡಿವರೆಲ್ಲರು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರ ಕೈಯಲ್ಲಿ ಒಂದು ಪಾತ್ರೆಯು ಇದೆ. ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿ ಇದೆ. ಅದನ್ನು ಅವರು ಹೊಯ್ಯುತ್ತಾರೆ. ಅದರ ಮಡ್ಡಿಯನ್ನು ಸಹ ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.