Psalms 76:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು. ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ. ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ. ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಧೀರಹೃದಯರು ಸುಲಿಗೆಯಾಗಿ ದೀರ್ಘನಿದ್ರೆ ಮಾಡಿದ್ದಾರೆ; ಎಲ್ಲಾ ಶೂರರ ಕೈಗಳು ಬಿದ್ದುಹೋದವು.
Kannada BSI Bible 2016
ಬಲವಾದ ಹೃದಯ ದವರು ಕೊಳ್ಳೆ ಮಾಡಲ್ಪಟ್ಟಿದ್ದಾರೆ, ತೂಕಡಿಸಿ ನಿದ್ರೆ ಹೋಗಿದ್ದಾರೆ; ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗ ಳನ್ನು ಕಂಡುಕೊಳ್ಳಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಧೀರಹೃದಯರು ಸುಲಿಗೆಯಾಗಿ ದೀರ್ಘನಿದ್ರೆಗೈದಿದ್ದಾರೆ; ಎಲ್ಲಾ ಶೂರರ ಕೈ ನಿಂತುಹೋದವು.
Kannada Bible (KNCL) BSI 2016
ಕೆಚ್ಚೆದೆಯ ವೀರರು ಸುಲಿಗೆಯಾಗಿ ಚಿರನಿದ್ರೆಯಲಿಹರು I ಕೈಕತ್ತರಿಸಿದಂತಿರುವರು ಆ ರಣಧೀರರೆಲ್ಲರು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಧೀರಹೃದಯದವರು ಸುಲಿಗೆಯಾಗಿ, ಅಂತಿಮ ನಿದ್ರೆ ಹೊಂದಿದ್ದಾರೆ. ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗಳನ್ನೆತ್ತಲು ಶಕ್ತನಲ್ಲ.