Psalms 77:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ನನಗೆ ನಿದ್ರೆಮಾಡಗೊಡಿಸಲಿಲ್ಲ. ನಾನು ಬಹು ಗಲಿಬಿಲಿಗೊಂಡಿದ್ದರಿಂದ ನಿನ್ನೊಂದಿಗೆ ಮಾತಾಡಲಾಗಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ರೆಪ್ಪೆಗಳನ್ನು ಮುಚ್ಚದಂತೆ ನೀನು ಮಾಡಿದಿ. ತಳಮಳಗೊಂಡು ಮಾತನಾಡಲಾರದೆ ಇದ್ದೆನು.
Kannada BSI Bible 2016
ನನ್ನ ಕಣ್ಣುಗಳನ್ನು ಮುಚ್ಚದಂತೆ ನೀನು ಹಿಡಿಯುತ್ತೀ; ನಾನು ಮಾತಾಡದಂತೆ ಕಳವಳಪಟ್ಟಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ರೆಪ್ಪೆಗಳನ್ನು ಹಚ್ಚದಂತೆ ಮಾಡಿದಿ. ತಳಮಳಗೊಂಡು ಮಾತಾಡಲಾರದೆ ಇದ್ದೆನು.
Kannada Bible (KNCL) BSI 2016
ನಿದ್ರಿಸದಂತೆ ನೀನೆನ್ನ ಕಣ್‍ಗಳ ತೆರೆದಿರುವೆ I ನುಡಿಯಲಾಗದ ತೆರದಿ ನಾ ತಳಮಳಗೊಂಡಿರುವೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಕಣ್ಣುಗಳನ್ನು ಮುಚ್ಚದಿರುವಾಗ, ನಾನು ಮಾತನಾಡಲಾರದಂತೆ ಕಳವಳಪಟ್ಟೆನು.