Psalms 78:71 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆತನು ದಾವೀದನಿಗೆ ಕುರಿಗಳನ್ನು ಪರಿಪಾಲನೆ ಮಾಡುವ ಕೆಲಸದಿಂದ ತೆಗೆದುಹಾಕಿ ತನ್ನ ಜನರಾದ ಯಾಕೋಬ್ಯರನ್ನೂ ತನ್ನ ಆಸ್ತಿಯಾದ ಇಸ್ರೇಲರನ್ನೂ ಪರಿಪಾಲಿಸುವ ಉದ್ಯೋಗವನ್ನು ಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕುರಿಮರಿಗಳನ್ನು ರಕ್ಷಿಸುವ ಕೆಲಸದಿಂದ ಬಿಡಿಸಿ, ಅವನನ್ನು ತನ್ನ ಪ್ರಜೆಗಳಾದ ಯಾಕೋಬ್ಯರನ್ನು ಅಂದರೆ ತನ್ನ ಸ್ವತ್ತಾಗಿರುವ ಇಸ್ರಾಯೇಲರನ್ನು ಸಾಕುವುದಕ್ಕೆ ನೇಮಿಸಿದನು.
Kannada BSI Bible 2016
ತನ್ನ ಪ್ರಜೆಯಾದ ಯಾಕೋಬನ್ನೂ ಭಾದ್ಯತೆಯಾದ ಇಸ್ರಾಯೇಲನ್ನೂ ಮೇಯಿಸುವ ಹಾಗೆ, ಅವನನ್ನು ಕುರಿಮರಿಗಳ ಹಿಂಡಿ ನಿಂದ ತಂದನು.ಆತನು ತನ್ನ ಹೃದಯದ ಯಥಾ ರ್ಥತ್ವದ ಪ್ರಕಾರ ಅವರನ್ನು ಮೇಯಿಸಿ ತನ್ನ ಹಸ್ತ ಕೌಶಲ್ಯದಿಂದ ಅವರನ್ನು ನಡಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮರೀಕುರಿಗಳನ್ನು ರಕ್ಷಿಸುವ ಕೆಲಸದಿಂದ ಬಿಡಿಸಿ ಅವನನ್ನು ತನ್ನ ಪ್ರಜೆಗಳಾದ ಯಾಕೋಬ್ಯರನ್ನು ಅಂದರೆ ತನ್ನ ಸ್ವಾಸ್ತ್ಯವಾಗಿರುವ ಇಸ್ರಾಯೇಲ್ಯರನ್ನು ಸಾಕುವದಕ್ಕೆ ನೇವಿುಸಿದನು.
Kannada Bible (KNCL) BSI 2016
ಕುರಿಮೇಯಿಸುವಾ ಕಸಬಿನಿಂದವನನು ಬಿಡಿಸಿದನು I ಸ್ವಪ್ರಜೆ ಯಕೋಬ್ಯರನು, ಸ್ವಜನ ಇಸ್ರಯೇಲರನು I ಪರಿಪಾಲಿಸುವಂತೆ ನೇಮಕ ಮಾಡಿದನು ಆತನನು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಮ್ಮ ಪ್ರಜೆಯಾದ ಯಾಕೋಬ್ಯರನ್ನೂ ತಮ್ಮ ಬಾಧ್ಯತೆಯಾದ ಇಸ್ರಾಯೇಲರನ್ನೂ ಮೇಯಿಸುವ ಕುರುಬನನ್ನಾಗಿ ದಾವೀದನನ್ನು ನೇಮಿಸಿದರು.