Psalms 79:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಡೆಯನೇ, ನಮ್ಮ ಸುತ್ತಮುತ್ತಲಿನ ಜನರು ಮಾಡಿದ ಕಾರ್ಯಗಳಿಗಾಗಿ ಅವರನ್ನು ಏಳರಷ್ಟು ದಂಡಿಸು. ನಿನಗೆ ಅವಮಾನಮಾಡಿದ್ದರಿಂದ ಅವರನ್ನು ದಂಡಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸ್ವಾಮಿಯೇ, ನಿನ್ನನ್ನು ನಿಂದಿಸಿದ ಸುತ್ತಣ ಜನಾಂಗಗಳ ಉಡಿಲಲ್ಲಿ, ಏಳರಷ್ಟು ನಿಂದನೆ ತುಂಬಿರುವಂತೆ ಮಾಡು.
Kannada BSI Bible 2016
ಓ ಕರ್ತನೇ, ಅವರು ನಿನ್ನನ್ನು ನಿಂದಿಸಿದ ನಿಂದೆ ಯನ್ನು ನಮ್ಮ ನೆರೆಯವರಿಗೆ ಏಳರಷ್ಟು ಅವರ ಉಡಿ ಯಲ್ಲಿ ತಿರಿಗಿ ಹಾಕು.ಆಗ ನಿನ್ನ ಜನರೂ ನಿನ್ನ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿನ್ನನ್ನು ಕೊಂಡಾಡಿ ತಲತಲಾಂತರಕ್ಕೂ ನಿನ್ನ ಸ್ತೋತ್ರವನ್ನು ಸಾರುವೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸ್ವಾವಿುಯೇ, ನಿನ್ನನ್ನು ನಿಂದಿಸಿದ ಸುತ್ತಣ ಜನಾಂಗಗಳ ಉಡಿಲಲ್ಲಿ ಏಳರಷ್ಟು ಪ್ರತಿಫಲವು ತುಂಬಿರುವಂತೆಮಾಡು.
Kannada Bible (KNCL) BSI 2016
ಪ್ರಭು, ನಿನ್ನನು ನಿಂದಿಸಿದ ಅನ್ಯಜನರ ಮೇಲೆ I ಎರಗಲಿ ಏಳ್ಮಡಿ ದಂಡನೆ ಅವರೆದೆಯ ಮೇಲೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನಿಮ್ಮನ್ನು ನಿಂದಿಸಿದ ನಮ್ಮ ನೆರೆಯವರಿಗೆ ಏಳರಷ್ಟು ಪ್ರತಿದಂಡನೆಯನ್ನು ಅವರ ಮಡಿಲಿಗೆ ಕೊಡಿರಿ.