Psalms 79:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾವು ನಿನ್ನ ಜನರೂ ನೀನು ಪಾಲಿಸುವ ಮಂದೆಯೂ ಆಗಿದ್ದೇವೆ. ನಾವು ನಿನ್ನನ್ನು ಎಂದೆಂದಿಗೂ ಕೊಂಡಾಡುವೆವು. ನಿನ್ನನ್ನು ಸದಾಕಾಲ ಸ್ತುತಿಸುವೆವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಪ್ರಜೆಯೂ, ನೀನು ಪಾಲಿಸುವ ಮಂದೆಯೂ ಆಗಿರುವ ನಾವಾದರೋ, ಸದಾ ನಿನ್ನನ್ನು ಸ್ತುತಿಸುವವರಾಗಿ, ಮುಂದಣ ಸಂತಾನದವರೆಲ್ಲರಿಗೂ ನಿನ್ನ ಮಹತ್ತನ್ನು ವರ್ಣಿಸುತ್ತಾ ಹೋಗುವೆವು.
Kannada BSI Bible 2016
ಆಗ ನಿನ್ನ ಜನರೂ ನಿನ್ನ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿನ್ನನ್ನು ಕೊಂಡಾಡಿ ತಲತಲಾಂತರಕ್ಕೂ ನಿನ್ನ ಸ್ತೋತ್ರವನ್ನು ಸಾರುವೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಪ್ರಜೆಯೂ ನೀನು ಪಾಲಿಸುವ ಮಂದೆಯೂ ಆಗಿರುವ ನಾವಾದರೋ ಸದಾ ನಿನ್ನನ್ನು ಸ್ತುತಿಸುವವರಾಗಿ ಮುಂದಣ ಸಂತಾನದವರೆಲ್ಲರಿಗೂ ನಿನ್ನ ಮಹತ್ತನ್ನು ವರ್ಣಿಸುತ್ತಾ ಹೋಗುವೆವು.
Kannada Bible (KNCL) BSI 2016
ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು ನಿನಗೆ I ಸ್ಮರಿಸುವೆವು ನಿನ್ನ ಮಹಿಮೆಯನು ತಲತಲಾಂತರದವರೆಗೆ I ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ ಮಂದೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನಿಮ್ಮ ಜನರೂ, ನಿಮ್ಮ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿಮ್ಮನ್ನು ಕೊಂಡಾಡಿ, ತಲತಲಾಂತರಕ್ಕೂ ನಿಮ್ಮ ಸ್ತೋತ್ರವನ್ನು ಸಾರುವೆವು.