Psalms 79:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನನ್ನು ಅರಿಯದ ಜನಾಂಗಗಳ ಮೇಲೆಯೂ ನಿನ್ನ ಹೆಸರನ್ನು ಆರಾಧಿಸದ ಜನಾಂಗಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನನ್ನು ಅರಿಯದ ಮ್ಲೇಚ್ಛರ ಮೇಲೆಯೂ, ನಿನ್ನ ನಾಮವನ್ನು ಉಚ್ಚರಿಸದ ರಾಜ್ಯಗಳ ಮೇಲೆಯೂ, ನಿನ್ನ ರೌದ್ರವನ್ನು ಸುರಿದುಬಿಡು.
Kannada BSI Bible 2016
ನಿನ್ನನ್ನು ತಿಳಿಯದ ಜನಾಂಗ ಗಳ ಮೇಲೆಯೂ ನಿನ್ನ ಹೆಸರನ್ನು ಕರೆಯದ ರಾಜ್ಯಗಳ ಮೇಲೆಯೂ ನಿನ್ನ ಕೋಪವನ್ನು ಹೊಯಿದುಬಿಡು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನನ್ನು ಅರಿಯದ ಮ್ಲೇಚ್ಫರ ಮೇಲೆಯೂ ನಿನ್ನ ನಾಮವನ್ನು ಉಚ್ಚರಿಸದ ರಾಜ್ಯಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
Kannada Bible (KNCL) BSI 2016
ಸುರಿ ರೌದ್ರವನು ನಿನ್ನನರಿಯದಾ ಮ್ಲೇಚ್ಛರ ಮೇಲೆ I ನಿನ್ನ ಶ್ರೀನಾಮವನು ಉಚ್ಚರಿಸದಾ ರಾಜ್ಯಗಳ ಮೇಲೆ II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮನ್ನು ಸ್ವೀಕರಿಸದ ಜನಾಂಗಗಳ ಮೇಲೆಯೂ, ನಿಮ್ಮ ಹೆಸರನ್ನು ಕರೆಯದ ರಾಜ್ಯಗಳ ಮೇಲೆಯೂ ನಿಮ್ಮ ಕೋಪವನ್ನು ಸುರಿಸಿಬಿಡಿರಿ.