Psalms 80:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ? ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಅದರ ಬೇಲಿಯನ್ನೇಕೆ ಮುರಿದುಹಾಕಿದಿ? ದಾರಿಗರೆಲ್ಲರು ಅದರ ಫಲವನ್ನು ಕಿತ್ತುಬಿಡುತ್ತಾರೆ.
Kannada BSI Bible 2016
ಮಾರ್ಗ ದಲ್ಲಿ ಹಾದು ಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಯಾಕೆ ಅದರ ಬೇಲಿಗಳನ್ನು ನೀನು ಮುರಿದು ಬಿಟ್ಟಿದ್ದೀ?
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಅದರ ಬೇಲಿಯನ್ನೇಕೆ ಕಿತ್ತು ಹಾಕಿದಿ? ದಾರಿಗರೆಲ್ಲರು ಅದನ್ನು ತರೆದುಬಿಡುತ್ತಾರೆ.
Kannada Bible (KNCL) BSI 2016
ಕಿತ್ತುಹಾಕಿದೆಯೇಕೆ ಅದರ ಬೇಲಿಯನು? I ತರಿದುಬಿಡುವವರಲ್ಲವೆ ದಾರಿಗರು ಅದನು? II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಾರ್ಗದಲ್ಲಿ ಹಾದುಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಏಕೆ ಅದರ ಬೇಲಿಗಳನ್ನು ನೀವು ಮುರಿದುಬಿಟ್ಟಿದ್ದೀರಿ?