Psalms 81:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆತನು ಯೋಸೇಫನನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು. ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ಐಗುಪ್ತ ದೇಶವನ್ನು ಬಾಧಿಸಲಿಕ್ಕೆ ಹೊರಟಾಗ, ನೆನಪಿಗಾಗಿ ಯೋಸೇಫ್ಯರಲ್ಲಿ ಈ ಕಟ್ಟಳೆಯನ್ನು ನೇಮಿಸಿದನು. ಪರಿಚಯವಿಲ್ಲದವನ ಮಾತು ನನಗೆ ಕೇಳಿಸುತ್ತದೆ; ಏನೆಂದರೆ,
Kannada BSI Bible 2016
ನಾನು ತಿಳಿಯದ ಭಾಷೆಯನ್ನು ಕೇಳಿದ ಐಗುಪ್ತದೇಶದಲ್ಲೆಲ್ಲಾ ಆತನು ಹೊರಟಾಗ ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ಐಗುಪ್ತದೇಶವನ್ನು ಬಾಧಿಸಲಿಕ್ಕೆ ಹೊರಟಾಗ ನೆನಪಿಗಾಗಿ ಯೋಸೇಫ್ಯರಲ್ಲಿ ಇದನ್ನು ನೇವಿುಸಿದನು. ಗುರುತಿಲ್ಲದವನ ಮಾತು ನನಗೆ ಕೇಳಿಸುತ್ತದೆ; ಏನಂದರೆ -
Kannada Bible (KNCL) BSI 2016
ಈಜಿಪ್ಟರಿಗೆದುರಾಗಿ ತೆರಳಿದಂದು I ಜೋಸೆಪ್ಯರಿಗಾತ ವಿಧಿಸಿದಾಜ್ಞೆಯದು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರು ಈಜಿಪ್ಟಿಗೆ ವಿರೋಧವಾಗಿ ಹೊರಟಾಗ, ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು. ನಾವು ತಿಳಿಯದ ಭಾಷೆಯನ್ನು ಕೇಳಿದಾಗ: