Psalms 81:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ. ಆಗ ನಾನು ನಿಮ್ಮನ್ನು ಬಿಡಿಸಿದೆನು. ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು. ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು; ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು; ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು.
Kannada BSI Bible 2016
ಇಕ್ಕಟ್ಟಿನಲ್ಲಿ ಕರೆದಿ; ಆಗ ನಾನು ನಿನ್ನನ್ನು ತಪ್ಪಿಸಿಬಿಟ್ಟೆನು; ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟು ಮೆರಿಬಾ ನೀರುಗಳ ಬಳಿಯಲ್ಲಿ ನಿನ್ನನ್ನು ಶೋಧಿಸಿದೆನು ಸೆಲಾ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು; ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು; ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು. ಸೆಲಾ.
Kannada Bible (KNCL) BSI 2016
“ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ ನಿನ್ನನು I ಗುಡುಗುವ ಮೇಘದಿಂದ ಕೊಟ್ಟೆ ನಿನಗೆ ಸದುತ್ತರವನು I ಮೆರೀಬಾ ಪ್ರವಾಹಗಳ ಬಳಿ ಪರೀಕ್ಷಿಸಿದೆ ನಿನ್ನನು, II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಕ್ಕಟ್ಟಿನಲ್ಲಿ ನೀವು ಕರೆಮಾಡಿದಿರಿ, ಆಗ ನಾನು ನಿಮ್ಮನ್ನು ವಿಮೋಚಿಸಿದೆನು. ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟೆನು. ಮೆರೀಬಾ ನೀರಿನ ಹತ್ತಿರ ನಿಮ್ಮನ್ನು ಪರೀಕ್ಷಿಸಿದೆನು.