Psalms 89:50 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನೇ ನಿನ್ನ ಸೇವಕನಿಗೆ ಜನರು ಮಾಡಿದ ಅವಮಾನವನ್ನು ದಯವಿಟ್ಟು ಜ್ಞಾಪಿಸಿಕೊ. ಯೆಹೋವನೇ, ನಿನ್ನ ಶತ್ರುಗಳಿಂದ ಅವಮಾನಕರವಾದ ಮಾತುಗಳನ್ನು ನಾನು ಕೇಳಬೇಕಾಯಿತು. ನೀನು ಅಭಿಷೇಕಿಸಿದ ರಾಜನನ್ನು ಅವರು ಅವಮಾನ ಮಾಡಿದರು! (Verses 50-51)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನೇ, ನಿನ್ನ ವೈರಿಗಳು ನಿಂದಿಸುತ್ತಾರೆ; ನಿನ್ನ ಅಭಿಷಿಕ್ತನನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡುತ್ತಾರೆ.
Kannada BSI Bible 2016
ಕರ್ತನೇ, ನಿನ್ನ ಸೇವಕರ ನಿಂದೆ ಯನ್ನು, ಎಲ್ಲಾ ಪರಾಕ್ರಮಿಗಳ ನಿಂದೆಯನ್ನು ನಾನು ಹೇಗೆ ನನ್ನ ಎದೆಯಲ್ಲಿ ಹೊತ್ತೆನೆಂದೂ ಜ್ಞಾಪಕ ಮಾಡಿಕೋ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನೇ, ನಿನ್ನ ವೈರಿಗಳು ನಿಂದಿಸುತ್ತಾರೆ; ನಿನ್ನ ಅಭಿಷಿಕ್ತನನ್ನು ಹೆಜ್ಜೆಹೆಜ್ಜೆಗೂ ಅಪಮಾನ ಮಾಡುತ್ತಾರೆ.
Kannada Bible (KNCL) BSI 2016
ನೆನೆಸಿಕೊ ಪ್ರಭು, ನಿನ್ನ ಅಪಮಾನಿತ ಸೇವಕನನು I ಸ್ಮರಿಸಿಕೊ ಆತ ಹೊತ್ತಿರುವ ಪರರ ನಿಂದೆಯನು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನಿಮ್ಮ ಸೇವಕನು ನಿಂದೆ ಹೊಂದಿರುವದನ್ನು ನೆನಸಿಕೊಳ್ಳಿರಿ. ಎಲ್ಲಾ ರಾಷ್ಟ್ರಗಳ ಅಪಹಾಸ್ಯವನ್ನು ನಾನು ಹೇಗೆ ಸಹಿಸಿದೆನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.