Psalms 91:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು; ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ನನ್ನಲ್ಲಿ ಆಸಕ್ತನಾಗಿರುವುದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವುದರಿಂದ ಅವನನ್ನು ಉದ್ಧರಿಸುವೆನು.
Kannada BSI Bible 2016
ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.
Kannada Bible (KNCL) BSI 2016
ಪ್ರಭು: “ನನ್ನ ಭಕ್ತನಾದ್ದರಿಂದ ವಿಮೋಚಿಸುವೆನು ಅವನನು I ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆತನು ನನ್ನನ್ನು ಪ್ರೀತಿಸುವುದರಿಂದ ಆತನನ್ನು ಸಂರಕ್ಷಿಸುವೆನು. ಆತನು ನನ್ನ ನಾಮವನ್ನು ಸ್ವೀಕರಿಸಿದ್ದರಿಂದ ಆತನನ್ನು ಕಾಪಾಡುವೆನು.