Psalms 97:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಚೀಯೋನೇ, ಕೇಳಿ ಸಂತೋಷಪಡು! ಯೆಹೂದದ ಪಟ್ಟಣಗಳೇ, ಆನಂದಿಸಿರಿ. ಯಾಕೆಂದರೆ ಯೆಹೋವನ ತೀರ್ಪುಗಳು ನ್ಯಾಯವಾಗಿವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನೇ, ನೀನು ನ್ಯಾಯಸ್ಥಾಪಿಸಿದ ವಾರ್ತೆಯನ್ನು ಕೇಳಿ ಚೀಯೋನ್ ಪಟ್ಟಣವು ಹರ್ಷಿಸಿತು; ಯೆಹೂದ ಪ್ರಾಂತ್ಯದ ಊರುಗಳು ಸಂತೋಷಿಸಿದವು.
Kannada BSI Bible 2016
ಚೀಯೋನ್ ಇದನ್ನು ಕೇಳಿ ಸಂತೋಷಿಸಿತು. ಓ ಕರ್ತನೇ, ನಿನ್ನ ನ್ಯಾಯಗಳ ನಿಮಿತ್ತ ಯೆಹೂದದ ಕುಮಾರ್ತೆಗಳು ಉಲ್ಲಾಸಿಸುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನೇ, ನೀನು ನ್ಯಾಯಸ್ಥಾಪಿಸಿದ ವಾರ್ತೆಯನ್ನು ಕೇಳಿ ಚೀಯೋನ್ ಪಟ್ಟಣವು ಹರ್ಷಿಸಿತು; ಯೆಹೂದ ಪ್ರಾಂತದ ಊರುಗಳು ಸಂತೋಷಿಸಿದವು.
Kannada Bible (KNCL) BSI 2016
ಪ್ರಭು, ನಿನ್ನ ನ್ಯಾಯತೀರ್ಪನು ಕುರಿತು I ಸಿಯೋನ್ ನಗರವು ಆನಂದಪಟ್ಟಿತು I ಜುದೇಯ ಪ್ರಾಂತ್ಯವು ಹರ್ಷಗೊಂಡಿತು II
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನಿಮ್ಮ ನ್ಯಾಯಗಳನ್ನು ಚೀಯೋನ್ ಪಟ್ಟಣವು ಕೇಳಿ ಸಂತೋಷಿಸಿತು; ಯೆಹೂದದ ಪುತ್ರಿಯರು ಸಹ ಉಲ್ಲಾಸಿಸುತ್ತಾರೆ.