Revelation 13:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಮೃಗವು ಮೊದಲಿನ ಮೃಗದ ಅಧಿಕಾರವನ್ನೇ ಬಳಸುತ್ತದೆ. ಭೂಮಿಯ ಮೇಲೆ ವಾಸಿಸುವ ಜನರೆಲ್ಲರೂ ಮೊದಲಿನ ಮೃಗವನ್ನು ಆರಾಧಿಸುವಂತೆ ಮಾಡಲು ಅದು ತನ್ನ ಶಕ್ತಿಯನ್ನೆಲ್ಲಾ ಬಳಸುತ್ತದೆ. ಮರಣಕರವಾದ ಗಾಯದಿಂದ ಗುಣಮುಖವಾದದ್ದೇ ಮೊದಲನೆಯ ಮೃಗ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಮೃಗವು ಮೊದಲನೆಯ ಮೃಗದ ಎದುರು ತನ್ನ ಅಧಿಕಾರವನ್ನೆಲ್ಲಾ ನಡೆಸಿ, ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು.
Kannada BSI Bible 2016
ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಮುಂದೆಯೇ ನಡಿಸುತ್ತದೆ. ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸು ವಂತೆ ಇದು ಮಾಡುವಂಥದ್ದಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಮೃಗವು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಸನ್ನಿಧಿಯಲ್ಲೇ ನಡಿಸುತ್ತದೆ. ಇದು ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ನಮಸ್ಕರಿಸುವಂತೆ ಮಾಡುವಂಥದಾಗಿದೆ.
Kannada Bible (KNCL) BSI 2016
ಈ ಮೃಗವು, ಮೊದಲನೆಯ ಮೃಗಕ್ಕಿದ್ದ ಅಧಿಕಾರವನ್ನೆಲ್ಲಾ ಅದರ ಎದುರಿನಲ್ಲೇ ಚಲಾಯಿಸಿತು. ಮಾರಕವಾದ ಗಾಯದಿಂದ ಗುಣಹೊಂದಿದ ಆ ಮೊದಲನೆಯ ಮೃಗವನ್ನು ಭೂಲೋಕವು ಮತ್ತು ಅದರ ನಿವಾಸಿಗಳು ಆರಾಧಿಸುವಂತೆ ಮಾಡಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಎದುರಿನಲ್ಲಿ ಚಲಾಯಿಸಿತು. ಇದು ಮರಣಕರವಾದ ಗಾಯದಿಂದ ವಾಸಿಯಾದ ಮೊದಲನೆಯ ಮೃಗವನ್ನು ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು.