Revelation 13:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೃಗದ ತಲೆಗಳಲ್ಲಿ ಒಂದು ತಲೆಯು ಗಾಯಗೊಂಡು ಸತ್ತಂತೆ ಕಾಣುತ್ತಿತ್ತು. ಆದರೆ ಮರಣಕರವಾದ ಈ ಗಾಯವನ್ನು ವಾಸಿಮಾಡಲಾಯಿತು. ಈ ಲೋಕದಲ್ಲಿದ್ದ ಜನರೆಲ್ಲರೂ ಆಶ್ಚರ್ಯಗೊಂಡು ಆ ಮೃಗವನ್ನು ಹಿಂಬಾಲಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರ ತಲೆಗಳಲ್ಲಿ ಒಂದು ತಲೆ ಗಾಯಹೊಂದಿ ಸಾಯುವ ಹಾಗಿರುವುದನ್ನು ಕಂಡೆನು. ಆ ಮರಣಕರವಾದ ಗಾಯವು ವಾಸಿಯಾಯಿತು, ಭೂಲೋಕದವರೆಲ್ಲರು ಆ ಮೃಗವನ್ನು ನೋಡುತ್ತಾ ಆಶ್ಚರ್ಯಪಟ್ಟರು.
Kannada BSI Bible 2016
ಅದರ ತಲೆಗಳಲ್ಲಿ ಒಂದು ಗಾಯ ಹೊಂದಿ ಸಾಯುವಹಾಗಿರುವದನ್ನು ನಾನು ಕಂಡೆನು. ಮರಣಕರವಾದ ಆ ಗಾಯವು ವಾಸಿಯಾಯಿತು; ಆಗ ಭೂಲೋಕದವರೆಲ್ಲರು ಆ ಮೃಗದ ವಿಷಯವಾಗಿ ಆಶ್ಚರ್ಯಪಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರ ತಲೆಗಳಲ್ಲಿ ಒಂದು ತಲೆ ಗಾಯಹೊಂದಿ ಸಾಯುವ ಹಾಗಿರುವದನ್ನು ಕಂಡೆನು. ಆ ಮರಣಕರವಾದ ಗಾಯವು ವಾಸಿಯಾಯಿತು; ಭೂಲೋಕದವರೆಲ್ಲರು ಆ ಮೃಗವನ್ನು ನೋಡುತ್ತಾ ಆಶ್ಚರ್ಯಪಟ್ಟರು;
Kannada Bible (KNCL) BSI 2016
ಅದರ ತಲೆಗಳಲ್ಲಿ ಒಂದು ತಲೆ ಗಾಯಗೊಂಡು ಅದು ಸಾಯುವ ಸ್ಥಿತಿಯಲ್ಲಿತ್ತು. ಆದರೆ ಮಾರಕವಾದ ಆ ಗಾಯವು ಗುಣವಾಯಿತು. ಇದನ್ನು ಕಂಡ ಭೂಲೋಕದವರೆಲ್ಲರೂ ವಿಸ್ಮಯಗೊಂಡು ಆ ಮೃಗವನ್ನು ಹಿಂಬಾಲಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೃಗದ ತಲೆಗಳಲ್ಲಿ ಒಂದು ಮರಣಾಂತಿಕ ಗಾಯ ಹೊಂದಿದಂತಿರುವುದನ್ನು ನೋಡಿದೆನು. ಆದರೆ ಆ ಮರಣಕರವಾದ ಗಾಯವು ವಾಸಿಯಾಯಿತು. ಭೂಲೋಕವೆಲ್ಲಾ ಆ ಮೃಗವನ್ನು ಕಾಣುತ್ತಾ ಆಶ್ಚರ್ಯಪಟ್ಟಿತು.