Revelation 13:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಮೃಗವು ದೇವರಿಗೆ ಅಪಮಾನ ಮಾಡಲು ತನ್ನ ಬಾಯನ್ನು ತೆರೆಯಿತು. ಅಲ್ಲದೆ ದೇವರ ಹೆಸರಿನ ವಿರುದ್ಧವಾಗಿಯೂ ದೇವರು ವಾಸಿಸುವ ಸ್ಥಳದ ವಿರುದ್ಧವಾಗಿಯೂ ಪರಲೋಕದಲ್ಲಿ ಜೀವಿಸುವ ಜನರೆಲ್ಲರ ವಿರುದ್ಧವಾಗಿಯೂ ದೂಷಣೆ ಮಾಡಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಮೃಗವು ಬಾಯಿದೆರೆದು ದೇವರನ್ನು ದೂಷಿಸಿದ್ದಲ್ಲದೆ ಆತನ ನಾಮವನ್ನೂ, ಆತನು ವಾಸಿಸುವ ನಿವಾಸವನ್ನೂ, ಪರಲೋಕ ನಿವಾಸಿಗಳನ್ನೂ ದೂಷಿಸಿತು.
Kannada BSI Bible 2016
ಆಗ ಅದು ದೇವರ ಹೆಸರನ್ನೂ ಆತನ ಗುಡಾರವನ್ನೂ ಪರಲೋಕದಲ್ಲಿ ವಾಸವಾಗಿರುವವರನ್ನೂ ದೂಷಿಸಿ ದ್ದಲ್ಲದೆ ದೇವರಿಗೆ ವಿರೋಧವಾದ ದೂಷಣೆಗೆ ತನ್ನ ಬಾಯಿಯನ್ನು ತೆರೆಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದು ಬಾಯಿತೆರೆದು ದೇವರನ್ನು ದೂಷಿಸಿದ್ದಲ್ಲದೆ ಆತನ ನಾಮವನ್ನೂ ಆತನ ನಿವಾಸವನ್ನೂ ಪರಲೋಕ ನಿವಾಸಿಗಳನ್ನೂ ದೂಷಿಸಿತು.
Kannada Bible (KNCL) BSI 2016
ಅದು ಬಾಯಿ ತೆರೆದು ದೇವರನ್ನು ದೂಷಿಸಿತು; ಅವರ ನಾಮವನ್ನು ಶಪಿಸಿತು. ಅವರ ಆಲಯವನ್ನು, ಅಂದರೆ ಸ್ವರ್ಗನಿವಾಸಿಗಳೆಲ್ಲರನ್ನೂ ತೆಗಳಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಮೃಗವು ತನ್ನ ಬಾಯಿತೆರೆದು, ದೇವರಿಗೆ ವಿರುದ್ಧವಾಗಿ ದೂಷಿಸಿ, ಅವರ ನಾಮವನ್ನೂ ಅವರ ನಿವಾಸವನ್ನೂ ಮತ್ತು ಪರಲೋಕ ನಿವಾಸಿಗಳನ್ನೂ ದೂಷಿಸಿತು.