Revelation 15:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಈ ಏಳು ದೇವದೂತರಿಗೆ ಏಳು ಚಿನ್ನದ ಪಾತ್ರೆಗಳನ್ನು ನೀಡಿತು. ಈ ಪಾತ್ರೆಗಳು ಯುಗಯುಗಾಂತರಗಳಲ್ಲಿಯೂ ಜೀವಿಸುವ ದೇವರ ಕೋಪದಿಂದ ತುಂಬಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾಲ್ಕು ಜೀವಿಗಳಲ್ಲಿ ಒಂದು ಆ ಏಳು ಮಂದಿ ದೇವದೂತರಿಗೆ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ ಏಳು ಚಿನ್ನದ ಬಟ್ಟಲುಗಳನ್ನು ಕೊಟ್ಟಿತು.
Kannada BSI Bible 2016
ದೇವರ ಮಹಿಮೆ ಯಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆ ಯಿಂದ ಆಲಯವು ತುಂಬಿದ ಕಾರಣ ಆ ಏಳುಮಂದಿ ದೂತರ ಏಳು ಉಪದ್ರವಗಳು ತೀರುವ ತನಕ ಆ ಆಲಯದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ.ದೇವರ ಮಹಿಮೆ ಯಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆ ಯಿಂದ ಆಲಯವು ತುಂಬಿದ ಕಾರಣ ಆ ಏಳುಮಂದಿ ದೂತರ ಏಳು ಉಪದ್ರವಗಳು ತೀರುವ ತನಕ ಆ ಆಲಯದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾಲ್ಕು ಜೀವಿಗಳಲ್ಲಿ ಒಂದು ಈ ಏಳು ಮಂದಿ ದೇವದೂತರಿಗೆ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ ಏಳು ಚಿನ್ನದ ಪಾತ್ರೆಗಳನ್ನು ಕೊಟ್ಟಿತು.
Kannada Bible (KNCL) BSI 2016
ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಈ ಏಳು ಮಂದಿ ದೇವದೂತರಿಗೆ ಏಳು ಚಿನ್ನದ ಪಾತ್ರೆಗಳನ್ನು ಕೊಟ್ಟಿತು. ಆ ಪಾತ್ರೆಗಳಲ್ಲಿ ಯುಗಯುಗಾಂತರಕ್ಕೂ ಜೀವಿಸುವ ದೇವರ ರೋಷವು ತುಂಬಿತುಳುಕುತ್ತಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾಲ್ಕು ಜೀವಿಗಳಲ್ಲಿ ಒಂದು, ಆ ಏಳು ದೂತರಿಗೆ, ಯುಗಯುಗಾಂತರಗಳಲ್ಲಿಯೂ ಜೀವಿಸುವವರಾದ ದೇವರ ಕೋಪದಿಂದ ತುಂಬಿದ್ದ ಏಳು ಚಿನ್ನದ ಬೋಗುಣಿಗಳನ್ನು ಕೊಟ್ಟಿತು.