Revelation 16:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಜನರು ನಿನ್ನ ಪರಿಶುದ್ಧ ಜನರ ಮತ್ತು ನಿನ್ನ ಪ್ರವಾದಿಗಳ ರಕ್ತವನ್ನು ಸುರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದ್ದರಿಂದ, ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು.
Kannada BSI Bible 2016
ಅವರು ಪರಿಶುದ್ಧರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ನಾನು ಕೇಳಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ದೇವಜನರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ; ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ಕೇಳಿದೆನು.
Kannada Bible (KNCL) BSI 2016
ದೇವಜನರ, ಪೂಜ್ಯಪ್ರವಾದಿಗಳ ರಕ್ತಪಾತಕರಿಗೆ ಕುಡಿಯಲು ನೀನಿತ್ತೆ ಆ ರಕ್ತವ ನೇ ಅವರ ಕೃತ್ಯಕ್ಕದುವೇ ತಕ್ಕ ಸಂಭಾವನೆ,” ಎಂದು ಹಾಡುವುದನ್ನು ನಾನು ಕೇಳಿಸಿಕೊಂಡೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ನಿಮ್ಮ ಭಕ್ತರ ಮತ್ತು ನಿಮ್ಮ ಪ್ರವಾದಿಗಳ ರಕ್ತವನ್ನು ಸುರಿಸಿದ್ದಾರೆ. ನೀವು ಅವರಿಗೆ ಕುಡಿಯುವುದಕ್ಕೆ ರಕ್ತವನ್ನೇ ಕೊಟ್ಟಿರುವಿರಿ. ಅವರು ಅದಕ್ಕೆ ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು.