Revelation 17:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಐದು ಮಂದಿ ರಾಜರುಗಳು ಈಗಾಗಲೇ ಸತ್ತಿದ್ದಾರೆ. ಒಬ್ಬ ರಾಜನು ಮಾತ್ರ ಈಗ ಜೀವಿಸಿದ್ದಾನೆ. ಕೊನೆಯ ರಾಜನು ಬರುತ್ತಾನೆ. ಅವನು ಬಂದು ಸ್ವಲ್ಪಕಾಲ ಮಾತ್ರ ಇರುತ್ತಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಅವು ಏಳು ರಾಜರುಗಳೂ ಆಗಿದ್ದಾರೆ. ಅವರಲ್ಲಿ ಐದು ರಾಜರು ಬಿದ್ದಿದ್ದಾರೆ. ಒಬ್ಬನು ಇದ್ದಾನೆ. ಮತ್ತೊಬ್ಬನು ಇನ್ನು ಬಂದಿಲ್ಲ. ಅವನು ಬಂದಾಗ ಸ್ವಲ್ಪ ಕಾಲ ಇರಬೇಕಾಗುತ್ತದೆ.
Kannada BSI Bible 2016
ಇದಲ್ಲದೆ ಅವು ಏಳು ಮಂದಿ ರಾಜರು; ಐದು ಮಂದಿ ಬಿದ್ದು ಹೋಗಿದ್ದಾರೆ. ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ. ಬಂದ ಮೇಲೆ ಅವನು ಸ್ವಲ್ಪಕಾಲ ಇರಲೇ ಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವು ಏಳು ಮಂದಿ ಅರಸುಗಳನ್ನು ಸೂಚಿಸುತ್ತವೆ; ಅವರಲ್ಲಿ ಐದು ಮಂದಿ ಬಿದ್ದುಹೋಗಿದ್ದಾರೆ, ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ. ಬಂದ ಮೇಲೆ ಅವನು ಸ್ವಲ್ಪಕಾಲ ಇರಬೇಕು.
Kannada Bible (KNCL) BSI 2016
ಈ ಏಳು ರಾಜರಲ್ಲಿ ಈಗಾಗಲೇ ಐದುಮಂದಿ ಪತನಹೊಂದಿದ್ದಾರೆ. ಒಬ್ಬ ರಾಜನು ಈಗ ಆಳುತ್ತಿದ್ದಾನೆ. ಮತ್ತೊಬ್ಬನು ಇನ್ನೂ ತಲೆದೋರಿಲ್ಲ. ಅವನು ಬಂದಾಗ ಕೊಂಚಕಾಲ ಮಾತ್ರ ರಾಜ್ಯವಾಳುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರಲ್ಲಿ ಐದು ರಾಜರು ಬಿದ್ದಿದ್ದಾರೆ; ಒಬ್ಬನು ಇದ್ದಾನೆ, ಇನ್ನೊಬ್ಬನು ಇನ್ನೂ ಬಂದಿಲ್ಲ. ಅವನು ಬಂದಾಗ ಸ್ವಲ್ಪಕಾಲ ಇರಬೇಕಾಗುತ್ತದೆ.