Revelation 18:10 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವಳ ಯಾತನೆಯನ್ನು ಕಂಡು ರಾಜರುಗಳು ಭಯದಿಂದ ದೂರನಿಂತು ಹೀಗೆನ್ನುವರು:
Kannada BSI Bible 2016
ಅವರು ದೂರದಲ್ಲಿ ನಿಂತು ಅವಳಿಗುಂಟಾದ ಯಾತ ನೆಯ ಭಯದಿಂದ--ಅಯ್ಯೋ, ಅಯ್ಯೋ, ಆ ಮಹಾಪಟ್ಟಣವಾದ ಬಾಬೆಲೇ, ಬಲಿಷ್ಠವಾದ ನಗ ರಿಯೇ, ಒಂದೇ ಗಳಿಗೆಯಲ್ಲಿ ನಿನಗೆ ತೀರ್ಪಾಯಿತಲ್ಲಾ ಎಂದು ಹೇಳುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಯ್ಯೋ, ಅಯ್ಯೋ, ಮಹಾಪಟ್ಟಣವೇ, ಬಾಬೆಲೇ, ಬಲಿಷ್ಠವಾದ ನಗರಿಯೇ, ನಿನಗೆ ವಿಧಿಸಲ್ಪಟ್ಟ ದಂಡನೆಯು ಒಂದೇ ಗಳಿಗೆಯಲ್ಲಿ ಬಂತಲ್ಲಾ ಎಂದು ಹೇಳುವರು.
Kannada Bible (KNCL) BSI 2016
ಅವಳಿಗಾದ ಚಿತ್ರಹಿಂಸೆಯ ನಿಮಿತ್ತ ಭಯಪಟ್ಟು ದೂರದಲ್ಲೇ ನಿಂತು ಗೋಳಾಡುತ್ತಾ: “ಅಯ್ಯೋ! ಅಯ್ಯೋ! ಬಲಿಷ್ಠ ಬಾಬಿಲೋನ್ ಮಹಾನಗರಿಯೇ, ಒಂದೇ ತಾಸಿನಲ್ಲಿ ಬಂದೊದಗಿತಲ್ಲಾ ನಿನಗಿಂಥ ದುರ್ಗತಿ,” ಎಂದು ಪ್ರಲಾಪಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಕೆಯ ಯಾತನೆಯ ದೆಸೆಯಿಂದ ಹೆದರಿ, ದೂರದಲ್ಲಿ ನಿಂತು: “ ‘ಅಯ್ಯೋ! ಅಯ್ಯೋ! ಮಹಾನಗರಿಯೇ, ಬಲಿಷ್ಠನಗರಿ ಬಾಬಿಲೋನೇ! ಒಂದೇ ತಾಸಿನಲ್ಲಿ ನಿನಗೆ ತೀರ್ಪಾಯಿತಲ್ಲಾ?’ ಎಂದು ಶೋಕಿಸುವರು.