Revelation 18:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಶ್ರೀಮಂತಿಕೆಯೆಲ್ಲವೂ ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ!’ “ಹಡಗುಗಳ ಒಡೆಯರೂ ಹಡಗುಗಳಲ್ಲಿ ಸಂಚರಿಸುವ ಜನರೆಲ್ಲರೂ ನಾವಿಕರೂ ಸಮುದ್ರದಿಂದ ಹಣವನ್ನು ಗಳಿಸುವ ಜನರೆಲ್ಲರೂ ದೂರದಲ್ಲಿ ನಿಂತುಕೊಂಡು
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಷ್ಟು ಐಶ್ವರ್ಯವು ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ ಎಂದು ಪರಿತಪಿಸುವರು. ಇದಲ್ಲದೆ ಹಡಗುಗಳ ಯಜಮಾನರೂ, ಪಯಣಿಗರೂ, ನಾವಿಕರೂ ಸಮುದ್ರದಿಂದ ತಮ್ಮ ಜೀವನವನ್ನುಮಾಡುತ್ತಿದ್ದವರೆಲ್ಲರೂ ದೂರದಲ್ಲಿ ನಿಂತು,
Kannada BSI Bible 2016
ಅಷ್ಟು ದೊಡ್ಡ ಐಶ್ವರ್ಯವು ಒಂದೇ ಗಳಿಗೆಯಲ್ಲಿ ಇಲ್ಲದೆ ಹೋಯಿತಲ್ಲಾ ಅನ್ನುವರು. ಇದಲ್ಲದೆ ಹಡಗುಗಳ ಯಜಮಾನರೂ ಹಡಗುಗಳಲ್ಲಿ ಜೊತೆಯಾಗಿರುವವರೂ ನಾವಿಕರೂ ಸಮುದ್ರದ ಮೇಲೆ ವ್ಯಾಪಾರ ಮಾಡುವವರೆಲ್ಲರೂ ದೂರದಲ್ಲಿ ನಿಂತು
Kannada BSI JV (ಕನ್ನಡ ಸತ್ಯವೇದವು J.V. (BSI))
ಅಷ್ಟು ಐಶ್ವರ್ಯವು ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ ಎಂದು ಹಂಬಲಿಸುವರು. ಇದಲ್ಲದೆ ಹಡಗುಗಳ ಯಜಮಾನರೂ ಸಮುದ್ರಪ್ರಯಾಣ ಮಾಡುವವರೂ ನಾವಿಕರೂ ಸಮುದ್ರದ ಮೇಲೆ ಕೆಲಸವನ್ನು ನಡಿಸಿ ಜೀವನ ಮಾಡುವವರೆಲ್ಲರೂ ದೂರದಲ್ಲಿ ನಿಂತು
Kannada Bible (KNCL) BSI 2016
ಆಗ ಹಡಗುಗಳ ಮಾಲೀಕರೆಲ್ಲರೂ ಸಮುದ್ರದ ಪ್ರಯಾಣಿಕರೂ ನಾವಿಕರೂ ಸಮುದ್ರದ ದುಡಿಮೆಗಾರರೂ ದೂರದಲ್ಲಿ ನಿಂತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂದೇ ತಾಸಿನಲ್ಲಿ ಅಂಥ ಮಹಾ ಐಶ್ವರ್ಯವು ನಾಶವಾಗಿ ಹೋಯಿತಲ್ಲಾ?’ ” ಎಂದು ಗೋಳಾಡುವರು. “ಪ್ರತಿಯೊಂದು ಹಡಗಿನ ಮಾಲೀಕರು ಮತ್ತು ಹಡಗು ಪಯಣಿಗರು, ನಾವಿಕರು ಮತ್ತು ಸಮುದ್ರದಿಂದ ತಮ್ಮ ಜೀವನೋಪಾಯ ಮಾಡುವವರೆಲ್ಲರೂ ದೂರದಲ್ಲಿ ನಿಂತು