Revelation 18:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವರ ಕೋಪವೆಂಬ ಮತ್ತು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಲೋಕದ ಜನರೆಲ್ಲರೂ ಕುಡಿದು ಮತ್ತರಾದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಲ್ಲಾ ದೇಶಗಳವರೂ ಅವಳ ಜಾರತ್ವವೆಂಬ ಕ್ರೌರ್ಯದ ದ್ರಾಕ್ಷಾರಸವನ್ನು ಕುಡಿದರು. ಅವಳೊಂದಿಗೆ ಭೂಲೋಕದ ರಾಜರು ವ್ಯಭಿಚಾರ ಮಾಡಿದರು. ಅವಳ ಭೋಗವಿಲಾಸದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು” ಎಂದು ಹೇಳಿದನು.
Kannada BSI Bible 2016
ಎಲ್ಲಾ ಜನಾಂಗಗಳು ಅವಳ ಜಾರತ್ವವೆಂಬ ಕೋಪದ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು; ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು; ಅವಳ ಅತಿಶಯವಾದ ವೈಭವದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಲ್ಲಾ ಜನಾಂಗಗಳು ಅವಳ ಅತಿಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದರು; ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು; ಅವಳು ಸುಖಭೋಗಿನಿಯಾಗಿದ್ದದರಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು ಎಂದು ಹೇಳಿದನು.
Kannada Bible (KNCL) BSI 2016
ಕುಡಿಸಿದಳು ನಾಡುನಾಡುಗಳಿಗೆ ತನ್ನ ಹಾದರವೆಂಬ ಮದ್ಯವನು. ವ್ಯಭಿಚಾರಗೈದರು ಅವಳೊಡನೆ ಭೂರಾಜರು ಅವಳ ಭೋಗವಿಲಾಸದಿಂದ ಧನಿಕರಾದರು ಇಳೆಯ ವರ್ತಕರು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ಎಲ್ಲಾ ದೇಶಗಳೂ ಆಕೆಯ ಜಾರತ್ವಗಳೆಂಬ ಅತ್ಯಾಸಕ್ತಿಯ ದ್ರಾಕ್ಷಾರಸವನ್ನು ಕುಡಿದಿವೆ. ಭೂಲೋಕದ ಅರಸರು ಆಕೆಯೊಂದಿಗೆ ವ್ಯಭಿಚಾರ ಮಾಡಿದರು, ಭೂಲೋಕದ ವರ್ತಕರು ಆಕೆಯ ಭೋಗ ವಸ್ತುಗಳಿಂದ ಸಿರಿವಂತರಾದರು,” ಎಂದು ಕೂಗಿದನು.