Revelation 21:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವದೂತನು ಗೋಡೆಯನ್ನೂ ಅಳೆದನು. ಅದು ಮನುಷ್ಯರ ಮೊಳದಲ್ಲಿ 144 ಮೊಳವಿತ್ತು. ದೇವದೂತನು ಉಪಯೋಗಿಸಿದ ಅಳತೆಮಾನವೇ ಅದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಅದರ ಗೋಡೆಯನ್ನು ಅಳತೆ ಮಾಡಿದನು. ಅದು ನೂರನಲ್ವತ್ತು ನಾಲ್ಕು ಮೊಳವಾಗಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಎಂದರೆ ದೇವದೂತನ ಮೊಳ.
Kannada BSI Bible 2016
ಅದರ ಗೋಡೆಯನ್ನು ಅವನು ಅಳತೆ ಮಾಡಿದನು; ಅದು ನೂರನಾಲ್ವತ್ತ ನಾಲ್ಕು ಮೊಳ ದಷ್ಟಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಅಂದರೆ ದೂತನ ಮೊಳ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರ ಪ್ರಾಕಾರವನ್ನೂ ಅಳತೆಮಾಡಿದನು; ಅದು ನೂರನಾಲ್ಪತ್ತುನಾಲ್ಕು ಮೊಳವಾಯಿತು; ಈ ಲೆಕ್ಕದಲ್ಲಿ ಮನುಷ್ಯನ ಮೊಳ ಅಂದರೆ ದೇವದೂತನ ಮೊಳ.
Kannada Bible (KNCL) BSI 2016
ಅನಂತರ, ಆತನು ನಗರದ ಕೋಟೆಯನ್ನು ಅಳೆದನು. ಅದು ಆತನು ಅಳೆದ ಆಳತೆಯ ಪ್ರಮಾಣದಲ್ಲಿ ಅರವತ್ತು ಮೀಟರಿನಷ್ಟು ಎತ್ತರವಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಅದರ ಗೋಡೆಯನ್ನೂ ಅಳತೆ ಮಾಡಿದನು. ಅದು 65 ಮೀಟರ್ ಆಗಿತ್ತು. ಮನುಷ್ಯನ ಅಳತೆಯಂತೆ ದೇವದೂತನು ಅಳೆದನು.