Revelation 22:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಗರದ ಹೊರಭಾಗದಲ್ಲಿ ನಾಯಿಗಳಿವೆ (ಕೆಟ್ಟಜನರು), ಕೆಟ್ಟ ಮಾಟವನ್ನು ಮಾಡುವ ಜನರಿದ್ದಾರೆ, ಲೈಂಗಿಕ ಪಾಪಗಳನ್ನು ಮಾಡುವ ಜನರಿದ್ದಾರೆ, ಕೊಲೆಗಾರರಿದ್ದಾರೆ, ವಿಗ್ರಹಗಳನ್ನು ಆರಾಧಿಸುವ ಜನರಿದ್ದಾರೆ ಮತ್ತು ಸುಳ್ಳನ್ನು ಪ್ರೀತಿಸುವ ಮತ್ತು ಹೇಳುವ ಜನರಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ ಹೊರಗಿರುವರು” ಎಂದು ಹೇಳಿದನು.
Kannada BSI Bible 2016
ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆ ಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾಯಿಗಳಂತಿರುವವರೂ ಮಾಟಗಾರರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.
Kannada Bible (KNCL) BSI 2016
ಆದರೆ ಶುನಕ ಸಮಾನರೂ ಮಾಟಮಂತ್ರಗಾರರೂ ಕಾಮುಕರೂ ಕೊಲೆಗಾರರೂ ವಿಗ್ರಹಾರಾಧಕರೂ ಅಸತ್ಯವಾದಿಗಳೂ ನಗರದ ಹೊರಗೆ ಬಿದ್ದಿರುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳನ್ನು ಪ್ರೀತಿಸಿ ಅನುಸರಿಸುವರೆಲ್ಲರೂ ಹೊರಗಿರುವರು.