Revelation 6:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಮತ್ತೊಂದು ಕುದುರೆಯು ಹೊರಗೆ ಬಂದಿತು. ಇದು ಕೆಂಪು ಕುದುರೆಯಾಗಿತ್ತು. ಈ ಕುದುರೆಯ ಮೇಲೆ ಕುಳಿತಿದ್ದ ಸವಾರನಿಗೆ ಲೋಕದಲ್ಲಿದ್ದ ಶಾಂತಿಯನ್ನು ತೆಗೆದುಹಾಕಲೂ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡಲೂ ಅವನಿಗೆ ಅಧಿಕಾರವನ್ನು ನೀಡಲಾಗಿತ್ತು. ಈ ಸವಾರನಿಗೆ ಒಂದು ಮಹಾಖಡ್ಗವನ್ನೂ ಕೊಡಲಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು.
Kannada BSI Bible 2016
ಆಗ ಮತ್ತೊಂದು ಕೆಂಪು ಕುದುರೆಯು ಹೊರಗೆ ಹೋಯಿತು; ಅದರ ಮೇಲೆ ಕೂತಿದ್ದವನಿಗೆ ಭೂಮಿಯಿಂದ ಸಮಾಧಾನವನ್ನು ತೆಗೆದುಬಿಡುವ ದಕ್ಕೂ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವವರಾಗು ವಂತೆ ಮಾಡುವದಕ್ಕೂ ಅಧಿಕಾರವು ಕೊಡಲ್ಪಟ್ಟಿತು; ಇದಲ್ಲದೆ ಅವನಿಗೆ ದೊಡ್ಡ ಕತ್ತಿಯು ಕೊ
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಮತ್ತೊಂದು ಕುದುರೆಯು ಹೊರಟು ಬಂತು; ಅದು ಕೆಂಪು ಕುದುರೆ. ಅದರ ಮೇಲೆ ಕೂತಿದ್ದವನಿಗೆ ಭೂವಿುಯಿಂದ ಸಮಾಧಾನವನ್ನು ತೆಗೆದುಬಿಡುವದಕ್ಕೂ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವವರಾಗುವಂತೆ ಮಾಡುವದಕ್ಕೂ ಅಧಿಕಾರವು ಕೊಡಲ್ಪಟ್ಟಿತು; ಅವನಿಗೆ ದೊಡ್ಡ ಕತ್ತಿಯು ಕೊಡಲ್ಪಟ್ಟಿತು.
Kannada Bible (KNCL) BSI 2016
ಆಗ ಕೆಂಪು ಕುದುರೆ ಒಂದು ಹೊರಟುಬಂದಿತು. ಅದರ ಮೇಲೆ ಒಬ್ಬನು ಕುಳಿತಿದ್ದನು. ವಿಶ್ವದಲ್ಲಿ ಶಾಂತಿಯನ್ನು ಅಳಿಸಿಹಾಕಿ ಲೋಕದ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡುವ ಅಧಿಕಾರವನ್ನು ಅವನಿಗೆ ಕೊಡಲಾಗಿತ್ತು. ಇದಲ್ಲದೆ, ಅವನಿಗೆ ದೊಡ್ಡ ಖಡ್ಗವನ್ನೂ ಸಹ ಕೊಡಲಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಕೆಂಪು ಬಣ್ಣದ ಬೇರೊಂದು ಕುದುರೆಯು ಹೊರಟು ಬಂದಿತು. ಅದರ ಸವಾರನಿಗೆ ಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೂ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವುದಕ್ಕೂ ಅಧಿಕಾರವು ಕೊಡಲಾಗಿತ್ತು. ಅವನಿಗೆ ದೊಡ್ಡ ಕತ್ತಿಯು ಸಹ ಕೊಡಲಾಗಿತ್ತು.