Revelation 6:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನೋಡಿದಾಗ, ನನ್ನ ಮುಂದೆ ಒಂದು ಬೂದುಬಣ್ಣದ ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲೆ ಕುಳಿತಿದ್ದ ಸವಾರನೇ ಮೃತ್ಯು. ಅವನ ಹಿಂದೆ ಪಾತಾಳ ಎಂಬುವನು ಬಂದನು. ಅವರಿಗೆ ಭೂಮಿಯ ಕಾಲುಭಾಗದ ಮೇಲೆ ಅಧಿಕಾರವನ್ನು ನೀಡಲಾಯಿತು. ಕತ್ತಿಯಿಂದಲೂ ಬರಗಾಲದಿಂದಲೂ ರೋಗಗಳಿಂದಲೂ ಮತ್ತು ಲೋಕದ ಮೇಲಿರುವ ಕಾಡುಮೃಗಗಳಿಂದಲೂ ಜನರನ್ನು ಕೊಲ್ಲುವ ಅಧಿಕಾರವನ್ನು ಅವರಿಗೆ ನೀಡಲಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ನಾನು ನೋಡಲು ಇಗೋ, ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು.
Kannada BSI Bible 2016
ನಾನು ನೋಡಲಾಗಿ ಒಂದು ಬೂದಿ ಬಣ್ಣದ ಕುದುರೆ ಯನ್ನು ಕಂಡೆನು. ಅದರ ಮೇಲೆ ಕೂತಿದ್ದವನ ಹೆಸರು ಮೃತ್ಯುವು; ನರಕವು ಅವನನ್ನು ಹಿಂಬಾಲಿಸಿತು. ಅವ ರಿಗೆ ಭೂಮಿಯ ಕಾಲುಭಾಗದ ಮೇಲೆ ಕತ್ತಿಯಿಂದಲೂ ಹಸಿವೆಯಿಂದಲೂ ಸಾವಿನಿಂದಲೂ ಭೂಮಿಯ ಮೃಗ ಗಳಿಂದಲೂ ಕೊಲ್ಲುವದಕ್ಕೆ ಅಧಿಕಾರವು ಕೊ
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರ ಮೇಲೆ ಕೂತಿದ್ದವನ ಹೆಸರು ಮೃತ್ಯುವು; ಅವನ ಹಿಂದೆ ಪಾತಾಳವೆಂಬವನು ಬಂದನು. ಅವರಿಗೆ ಭೂವಿುಯ ಕಾಲುಭಾಗದಲ್ಲಿ ಕತ್ತಿಯಿಂದಲೂ ಬರದಿಂದಲೂ ಅಂಟುರೋಗದಿಂದಲೂ ಕಾಡುಮೃಗಗಳಿಂದಲೂ ಕೊಲ್ಲುವದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
Kannada Bible (KNCL) BSI 2016
ಆಗ ಬೂದು ಕುದುರೆಯೊಂದು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು, ‘ಮೃತ್ಯು’ ಎಂದು. ಅವನನ್ನು ‘ಮೃತ್ಯುಲೋಕ’ ಎಂಬಾತನು ಹಿಂಬಾಲಿಸಿದನು. ಇವರಿಗೆ ಖಡ್ಗ, ಕ್ಷಾಮ, ಅಂಟುಜಾಡ್ಯ, ಕಾಡುಮೃಗ ಇವುಗಳಿಂದ ಭೂಲೋಕದ ಕಾಲುಭಾಗದ ಜನತೆಯನ್ನು ಕೊಂದುಹಾಕುವುದಕ್ಕೆ ಅಧಿಕಾರವನ್ನು ಕೊಡಲಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ನೋಡಲು, ಒಂದು ನಸು ಹಸಿರು ಬಣ್ಣದ ಕುದುರೆ ಕಾಣಿಸಿತು. ಅದರ ಸವಾರನಿಗೆ ಮೃತ್ಯುವೆಂದು ಹೆಸರಿತ್ತು. ಪಾತಾಳವೆಂಬವನು ಅವನ ಹಿಂದೆ ಹೋಗುತ್ತಿದ್ದನು. ಅವರಿಗೆ ಭೂಮಿಯ ನಾಲ್ಕನೆಯ ಒಂದು ಭಾಗದ ಮೇಲೆ ಕತ್ತಿ, ಕ್ಷಾಮ, ಮರಣ ಮತ್ತು ಭೂಮಿಯ ಕ್ರೂರಮೃಗಗಳಿಂದ ಕೊಲ್ಲುವ ಅಧಿಕಾರಕೊಡಲಾಗಿತ್ತು.