Revelation 9:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜನಗಳಿಗೆ ಐದು ತಿಂಗಳ ಕಾಲ ನೋವು ಉಂಟುಮಾಡುವಂತಹ ಶಕ್ತಿಯನ್ನು ಈ ಪ್ರಿಯತಮತೆಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಪ್ರಿಯತಮತೆಗಳಿಗೆ ಕೊಡಲಿಲ್ಲ. ಈ ಪ್ರಿಯತಮತೆಗಳು ಕುಟುಕಿದಾಗ ಚೇಳು ಕುಟುಕಿದಷ್ಟೇ ನೋವಾಗುತ್ತಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು.
Kannada BSI Bible 2016
ಅವರನ್ನು (ಮುದ್ರೆಯಿಲ್ಲದವರನ್ನು) ಕೊಲ್ಲದೆ ಐದು ತಿಂಗಳುಗಳವರೆಗೂ ಯಾತನೆಪಡಿಸಬೇಕೆಂದಾ ಯಿತು. ಅವರಿಗುಂಟಾದ ಯಾತನೆಯು ಮನುಷ್ಯನನ್ನು ಹೊಡೆಯುವ ಚೇಳಿನ ಯಾತನೆಯ ಹಾಗೆ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಪೀಡಿಸುವದಕ್ಕೆ ಅಪ್ಪಣೆಯಾಯಿತು. ಅವರಿಗುಂಟಾದ ಪೀಡೆಯು ಚೇಳು ಮನುಷ್ಯನನ್ನು ಹೊಡೆಯುವದರಿಂದುಂಟಾಗುವ ಪೀಡೆಗೆ ಸಮಾನವಾಗಿತ್ತು.
Kannada Bible (KNCL) BSI 2016
ಅಲ್ಲದೆ, ಅವರನ್ನು ಕೊಲ್ಲದೆಯೇ ಐದು ತಿಂಗಳಕಾಲ ಬಾಧಿಸಬೇಕೆಂದು ಆಜ್ಞಾಪಿಸಲಾಗಿತ್ತು. ಆ ಬಾಧೆ, ಚೇಳು ಕುಟುಕಿದರೆ ಉಂಟಾಗುವ ಬಾಧೆಯಂಥದ್ದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವುಗಳು ಅವರನ್ನು ಕೊಲ್ಲದೆ, ಐದು ತಿಂಗಳುಗಳವರೆಗೆ ಯಾತನೆಪಡಿಸುವುದಕ್ಕೆ ಅಧಿಕಾರ ಕೊಡಲಾಯಿತು. ಅವರ ಯಾತನೆಯು, ಚೇಳು ತನ್ನ ಕೊಂಡಿಯಿಂದ ಮನುಷ್ಯರನ್ನು ಕುಟುಕಿಹಾಕಿದಾಗ ಆಗುವ ನೋವಿನಂತಿತ್ತು.