Romans 10:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಯೆಹೂದ್ಯರೆಲ್ಲರೂ ಆ ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. “ಪ್ರಭುವೇ, ನಾವು ಅವರಿಗೆ ಹೇಳಿದ ಸಂಗತಿಗಳನ್ನು ಯಾರು ನಂಬಿದರು?” ಎಂದು ಯೆಶಾಯ ಹೇಳಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, “ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?” ಎಂದು ನುಡಿಯುತ್ತಾನೆ.
Kannada BSI Bible 2016
ಆದರೆ ಅವರೆಲ್ಲರೂ ಸುವಾರ್ತೆಗೆ ವಿಧೇಯರಾಗಲಿಲ್ಲ. ಆದದರಿಂದ ಯೆಶಾಯನು--ಕರ್ತನೇ, ನಮ್ಮ ವಾರ್ತೆಯನ್ನು ಯಾರು ನಂಬಿದರು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ವಿಷಯದಲ್ಲಿ ಯೆಶಾಯನು - ಕರ್ತನೇ, ನಾವು ಸಾರಿದ ವಾರ್ತೆಯನ್ನು ಯಾರು ನಂಬಿದರು ಎಂದು ನುಡಿಯುತ್ತಾನೆ.
Kannada Bible (KNCL) BSI 2016
ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಂಗೀಕರಿಸಲಿಲ್ಲ. ಆದ್ದರಿಂದಲೇ, ಯೆಶಾಯನು, “ಪ್ರಭುವೇ, ನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?” ಎಂದು ಮೊರೆಯಿಟ್ಟಿದ್ದಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಇಸ್ರಾಯೇಲರಲ್ಲಿ ಎಲ್ಲರೂ ಸುವಾರ್ತೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ, “ಕರ್ತನೇ, ನಮ್ಮ ಸಂದೇಶವನ್ನು ಯಾರು ನಂಬಿದರು?” ಎಂದು ಯೆಶಾಯ ಪ್ರವಾದಿಯು ಹೇಳುತ್ತಾನೆ.