Romans 15:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಇದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಯಾರಿಗೆ ಆತನ ಸಮಾಚಾರ ತಿಳಿದಿರುವುದಿಲ್ಲವೋ ಅವರೇ ಆತನನ್ನು ನೋಡುವರು. ಯಾರು ಆತನ ಬಗ್ಗೆ ಕೇಳಿರುವುದಿಲ್ಲವೋ ಅವರು ಆತನನ್ನು ಗ್ರಹಿಸಿಕೊಳ್ಳುವರು.” ಎಂಬುದಾಗಿ ಬರೆದಿರುವ ಪ್ರಕಾರ ನನ್ನ ಕೆಲಸವನ್ನು ನಡಿಸಿದ್ದೇನೆ.
Kannada BSI Bible 2016
ಆದರೆ ಬರೆಯಲ್ಪಟ್ಟಂತೆ--ಯಾರಿಗೆ ಆತನ ವಿಷಯವಾಗಿ ಹೇಳಲಿಲ್ಲವೋ ಅವರು ನೋಡುವರು; ಯಾರು ಕೇಳಲಿಲ್ಲವೋ ಅವರು ಗ್ರಹಿಸುವರು ಎಂಬದೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾರಿಗೆ ಆತನ ಸಮಾಚಾರ ಬಂದಿರಲಿಲ್ಲವೋ ಅವರೇ ಆತನನ್ನು ನೋಡುವರು; ಯಾರು ಆತನ ವರ್ತಮಾನವನ್ನು ಕೇಳಿರಲಿಲ್ಲವೋ ಅವರೇ ಗ್ರಹಿಸಿಕೊಳ್ಳುವರು ಎಂಬದಾಗಿ ಬರೆದಿರುವ ಪ್ರಕಾರ ನನ್ನ ಕೆಲಸವನ್ನು ನಡಿಸಿದ್ದೇನೆ.
Kannada Bible (KNCL) BSI 2016
“ಯಾರಿಗೆ ಆತನ ಸುದ್ದಿ ಮುಟ್ಟಿಲ್ಲವೋ ಅವರು ಆತನನು ನೋಡುವರು; ಯಾರು ಆತನ ವರ್ತಮಾನ ಕೇಳಿಲ್ಲವೋ ಅವರು ಆತನನು ಗ್ರಹಿಸಿಕೊಳ್ಳುವರು,” ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನನ್ನ ಕಾರ್ಯವನ್ನು ನಡೆಸಿದ್ದೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪವಿತ್ರ ವೇದದಲ್ಲಿ ಬರೆದಿರುವಂತೆ: “ಯಾರಿಗೆ ಆತನ ಸುದ್ದಿ ಮುಟ್ಟಲಿಲ್ಲವೋ ಅವರು ಆತನನ್ನು ಕಾಣುವರು; ಯಾರು ಆತನ ವರ್ತಮಾನ ಕೇಳಲಿಲ್ಲವೋ ಅವರು ಗ್ರಹಿಸಿಕೊಳ್ಳುವರು.”