Romans 15:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ನಾನು ಸ್ಪೇನಿಗೆ ಹೋಗುವಾಗ ನಿಮ್ಮನ್ನು ಸಂದರ್ಶಿಸುತ್ತೇನೆ. ಹೌದು, ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ ನಿಮ್ಮನ್ನು ಸಂದರ್ಶಿಸಿ, ಸ್ವಲ್ಪಕಾಲ ನಿಮ್ಮೊಂದಿಗೆ ಸಂತೋಷವಾಗಿ ತಂಗಿರುತ್ತೇನೆಂಬ ನಿರೀಕ್ಷೆ ನನಗಿದೆ. ಬಳಿಕ ನೀವು ನನ್ನ ಪ್ರಯಾಣಕ್ಕೆ ಸಹಾಯ ಮಾಡಬಹದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನನ್ನ ಮಾರ್ಗದಲ್ಲಿ ನಿಮ್ಮ ದರ್ಶನವನ್ನು ಮಾಡಬೇಕೆಂದು ಬಯಸಿದ್ದೇನೆ. ತರುವಾಯ ನಿಮ್ಮ ಜೊತೆಯಲ್ಲಿ ಸ್ವಲ್ಪ ಮಟ್ಟಿಗೆ ಸಂತೋಷವಾಗಿ ಸಮಯಕಳೆದ ನಂತರ ನೀವು ಆ ದೇಶಕ್ಕೆ ನನ್ನನ್ನು ಕಳುಹಿಸಿಕೊಡುವಿರೆಂದು ನಂಬುತ್ತೇನೆ.
Kannada BSI Bible 2016
ನಾನು ಸ್ಪೇನ್‌ ದೇಶಕ್ಕೆ ಯಾವ ಸಮಯದಲ್ಲಿಯಾದರೂ ಪ್ರಯಾಣ ಕೈಕೊಂಡರೆ ನಿಮ್ಮ ಬಳಿಗೆ ಬರುವೆನು; ಯಾಕಂದರೆ ನನ್ನ ಪ್ರಯಾಣದಲ್ಲಿ ನಾನು ನಿಮ್ಮನ್ನು ನೋಡುವೆನೆಂದು ಭರವಸವುಂಟು. ಇದಲ್ಲದೆ ಮೊದಲು ನಿಮ್ಮ ಅನ್ಯೋನ್ಯತೆಯಲ್ಲಿ ಸಂತೃಪ್ತನಾಗಿ ಮುಂದೆ ನನ್ನ ಮಾರ್ಗದಲ್ಲಿ ನಿಮ್ಮಿಂದ ಸಾಗಕ
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನನ್ನ ಮಾರ್ಗದಲ್ಲಿ ನಿಮ್ಮ ದರ್ಶನವನ್ನು ಮಾಡಬೇಕೆಂಬ ಅಭಿಪ್ರಾಯ ಉಂಟು. ತರುವಾಯ ನಿಮ್ಮ ಸಹವಾಸದಲ್ಲಿ ನನಗೆ ಸ್ವಲ್ಪಮಟ್ಟಿಗೆ ಸಂತೃಪ್ತಿಯಾದ ಮೇಲೆ ನೀವು ಆ ದೇಶಕ್ಕೆ ನನ್ನ ಪ್ರಯಾಣವನ್ನು ಸಾಗಿಸುವಿರೆಂದು ನಂಬುತ್ತೇನೆ.
Kannada Bible (KNCL) BSI 2016
ನಾನು ಸ್ಪೇಯಿನ್ ದೇಶಕ್ಕೆ ಹೋಗುವ ಮಾರ್ಗದಲ್ಲಿ ಮೊದಲು ನಿಮ್ಮನ್ನು ಕಾಣಬೇಕೆಂದಿದ್ದೇನೆ. ಸ್ವಲ್ಪಕಾಲ ನಿಮ್ಮೊಡನೆ ಸಂತೋಷವಾಗಿ ತಂಗಿದ್ದು ಬಳಿಕ ನಿಮ್ಮ ಸಹಾಯದಿಂದ ಆ ದೇಶಕ್ಕೆ ಪ್ರಯಾಣವನ್ನು ಮುಂದುವರಿಸುತ್ತೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನಿಮ್ಮನ್ನು ಸಂದರ್ಶಿಸುವ ನಿರೀಕ್ಷೆಯಲ್ಲಿದ್ದೇನೆ. ಸ್ವಲ್ಪಕಾಲ ನಿಮ್ಮ ಅನ್ಯೋನ್ಯತೆಯ ಆನಂದವನ್ನು ಪಡೆದ ಬಳಿಕ ಅಲ್ಲಿಗೆ ಹೋಗುವ ನನ್ನ ಪ್ರಯಾಣದಲ್ಲಿ ನಿಮ್ಮ ಸಹಕಾರವನ್ನು ಬಯಸುತ್ತೇನೆ.