Romans 15:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಲ್ಲಿನ ದೇವಜನರಲ್ಲಿ ಕೆಲವರು ಬಡವರಾಗಿದ್ದಾರೆ. ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಅಲ್ಲಿನ ಬಡಜನರಿಗಾಗಿ ಸಂತೋಷದಿಂದ ಧನಸಹಾಯ ಮಾಡಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಕೆಂದರೆ ಯೆರೂಸಲೇಮಿನಲ್ಲಿರುವ ದೇವಜನರೊಳಗೆ ಬಡವರಿಗೋಸ್ಕರ ಸ್ವಲ್ಪ ಹಣದ ಸಹಾಯವನ್ನು ಮಾಡಬೇಕೆಂಬುದಾಗಿ ಮಕೆದೋನ್ಯ, ಅಖಾಯ ಸೀಮೆಗಳವರು ಇಷ್ಟಪಟ್ಟಿದ್ದಾರೆ.
Kannada BSI Bible 2016
ಯೆರೂಸಲೇಮಿನಲ್ಲಿರುವ ಬಡವ ರಾದ ಪರಿಶುದ್ಧರಿಗೆ ಸ್ವಲ್ಪ ಸಹಾಯಮಾಡಲು ಮಕೆದೋನ್ಯ ಮತ್ತು ಅಖಾಯದವರು ಇಷ್ಟಪಟ್ಟಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಕಂದರೆ ಯೆರೂಸಲೇವಿುನಲ್ಲಿರುವ ದೇವಜನರೊಳಗೆ ಬಡವರಿಗೋಸ್ಕರ ಸ್ವಲ್ಪ ಹಣದ ಸಹಾಯವನ್ನು ಮಾಡಬೇಕೆಂಬದಾಗಿ ಮಕೆದೋನ್ಯ ಅಖಾಯ ಸೀಮೆಗಳವರು ಇಷ್ಟಪಟ್ಟಿದ್ದಾರೆ.
Kannada Bible (KNCL) BSI 2016
ಅಲ್ಲಿನ ದೇವಜನರಲ್ಲಿ ಬಡವರಾದವರಿಗೆ ಸಹಾಯನೀಡಲು ಮಕೆದೋನಿಯ ಮತ್ತು ಅಖಾಯದ ಸಹೋದರರು ಮುಂದೆ ಬಂದಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಕೆದೋನ್ಯ ಮತ್ತು ಅಖಾಯದವರು ಯೆರೂಸಲೇಮಿನ ಭಕ್ತರಲ್ಲಿರುವ ಬಡವರಾಗಿರುವವರಿಗೆ ಸಹಾಯ ಮಾಡುವುದು ಒಳ್ಳೆಯದೆಂದು ಭಾವಿಸಿದ್ದಾರೆ.