Romans 2:12 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಧರ್ಮಶಾಸ್ತ್ರವನ್ನು ಹೊಂದಿರುವ ಜನರು ಮತ್ತು ಧರ್ಮಶಾಸ್ತ್ರದ ಬಗ್ಗೆ ಕೇಳಿಯೂ ಇಲ್ಲದ ಜನರು ಪಾಪ ಮಾಡುವಾಗ ಅವರಿಬ್ಬರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡುವವರು ನಾಶವಾಗುವರು. ಅದೇ ರೀತಿಯಲ್ಲಿ, ಧರ್ಮಶಾಸ್ತ್ರವನ್ನು ಹೊಂದಿದವರಾಗಿ ಪಾಪ ಮಾಡುವವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಧರ್ಮಶಾಸ್ತ್ರವಿಲ್ಲದೆ ಪಾಪಮಾಡಿದವರು ಧರ್ಮಶಾಸ್ತ್ರವಿಲ್ಲದವರಾಗಿ ನಾಶಹೊಂದುವರು; ಮತ್ತು ಧರ್ಮಶಾಸ್ತ್ರಕ್ಕನುಸಾರವಾಗಿದ್ದು ಪಾಪಮಾಡಿದವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು.
Kannada BSI Bible 2016
ನ್ಯಾಯ ಪ್ರಮಾಣವಿಲ್ಲದೆ ಪಾಪ ಮಾಡಿದವರೆಲ್ಲರೂ ನ್ಯಾಯ ಪ್ರಮಾಣವಿಲ್ಲದೆ ನಾಶವಾಗುವರು; ನ್ಯಾಯಪ್ರಮಾಣ ವುಳ್ಳವರಾಗಿದ್ದು ಪಾಪ ಮಾಡಿದವರು ನ್ಯಾಯಪ್ರಮಾ ಣದಿಂದಲೇ ತೀರ್ಪು ಹೊಂದುವರು.
Kannada Bible (KNCL) BSI 2016
ಮೋಶೆಯ ಧರ್ಮಶಾಸ್ತ್ರದ ಅರಿವಿಲ್ಲದೆ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಒಳಗಾಗದೆಯೋ ನಾಶವಾಗುತ್ತಾರೆ. ಆ ಧರ್ಮಶಾಸ್ತ್ರದ ಅರಿವಿದ್ದೂ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಗುರಿಯಾಗುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಯಮವಿಲ್ಲದವರಾಗಿ ಪಾಪಮಾಡಿದವರು ನಿಯಮವಿಲ್ಲದೆಯೇ ನಾಶಹೊಂದುವರು. ನಿಯಮಕ್ಕೆ ಅಧೀನರಾಗಿದ್ದು ಪಾಪಮಾಡಿದವರು ನಿಯಮದ ಮೂಲಕವಾಗಿ ತೀರ್ಪನ್ನು ಹೊಂದುವರು.