Romans 2:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಧರ್ಮಶಾಸ್ತ್ರದ ಆಜ್ಞಾವಿಧಿಗಳಿಗನುಸಾರವಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಮ್ಮ ಹೃದಯಗಳು ಬಲ್ಲವೆಂದು ಅವರು ತಮ್ಮ ನಡತೆಯಿಂದಲೇ ತೋರ್ಪಡಿಸುತ್ತಾರೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದರಿಂದ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಆಲೋಚನೆಗಳು ವಾದಿಪ್ರತಿವಾದಿಗಳಂತೆ, ಇದು ತಪ್ಪೆಂದು ಅದು ತಪ್ಪಲ್ಲವೆಂದು ಹೇಳುತ್ತದೆ.
Kannada BSI Bible 2016
ಅವರ ಮನಸ್ಸಾಕ್ಷಿಯು ಸಹ ಸಾಕ್ಷಿಕೊಟ್ಟು ಅವರ ಯೋಚನೆಗಳು ಒಂದಕ್ಕೊಂದು ತಪ್ಪುಹೊರಿಸುತ್ತಾ ಇಲ್ಲವೆ ಪ್ರತಿವಾದ ಮಾಡುತ್ತಾ ಇರುವದರಿಂದ ಅವರು ತಮ್ಮ ಹೃದಯ ಗಳಲ್ಲಿ ಬರೆದಿರುವ ನ್ಯಾಯಪ್ರಮಾಣದ ಕ್ರಿಯೆಗಳನ್ನು ತೋರಿಸುತ್ತಾರೆ).
Kannada BSI JV (ಕನ್ನಡ ಸತ್ಯವೇದವು J.V. (BSI))
ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ - ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.
Kannada Bible (KNCL) BSI 2016
ಧರ್ಮಶಾಸ್ತ್ರದ ವಿಧಿನಿಯಮಗಳು ಅವರ ಹೃದಯಗಳಲ್ಲಿ ಲಿಖಿತವಾಗಿವೆಯೆಂದು ಅವರ ನಡತೆಯಿಂದಲೇ ವೇದ್ಯವಾಗುತ್ತದೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ತಮ್ಮ ನಡತೆಯಿಂದಲೇ ನಿಯಮವು ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಾಕ್ಷಿಕೊಡುತ್ತದೆ. ಅವರ ಯೋಚನೆಗಳು ಒಂದಕ್ಕೊಂದು ಇದು ತಪ್ಪು ಅಥವಾ ತಪ್ಪಲ್ಲ ಎಂಬುದನ್ನು ಸೂಚಿಸುತ್ತವೆ.