Romans 2:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾರು ಸ್ವಾರ್ಥಸಾಧಕರಾಗಿದ್ದು, ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ, ಅವರ ಮೇಲೆ ದೇವರ ಕೋಪ ಮತ್ತು ರೌದ್ರಗಳು ಬರುವವು.
Kannada BSI Bible 2016
ಕಲಹಪ್ರಿಯ ರಾಗಿದ್ದು ಸತ್ಯಕ್ಕೆ ವಿಧೇಯರಾಗದೆ ಅನೀತಿಗೆ ವಿಧೇಯ ರಾಗಿ
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾರು ಸ್ವೇಚ್ಫೆಯುಳ್ಳವರಾಗಿ ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ ಅವರಿಗೆ ಕೋಪ ರೌದ್ರಗಳು ಬರುವವು.
Kannada Bible (KNCL) BSI 2016
ಸ್ವಾರ್ಥಸಾಧಕರಾಗಿದ್ದು, ಸತ್ಯಕ್ಕೆ ಮಣಿಯದೆ, ದುರ್ಮಾರ್ಗವನ್ನೇ ಅವಲಂಬಿಸಿ ನಡೆಯುವವರ ಮೇಲೆ ದೇವರ ಕೋಪವೂ ಆಕ್ರೋಶವೂ ಎರಗುತ್ತವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾರು ಸ್ವಾರ್ಥಿಗಳಾಗಿದ್ದು ಸತ್ಯವನ್ನು ಅನುಸರಿಸದೆ ಅನೀತಿಯನ್ನು ಅನುಸರಿಸುತ್ತಾರೋ ಅವರ ವಿರುದ್ಧ ದೇವರಿಗೆ ಕೋಪವೂ ಆಕ್ರೋಶವೂ ಬರುತ್ತವೆ.