Romans 7:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ನಿಮಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ: ಗಂಡನು ಬದುಕಿರುವ ತನಕ ಹೆಂಡತಿಯು ಕಾನೂನಿನ ಪ್ರಕಾರ ಅವನಿಗೆ ಬದ್ಧಳಾಗಿರಬೇಕು. ಆದರೆ ಆಕೆಯ ಗಂಡನು ತೀರಿಕೊಂಡರೆ, ವಿವಾಹದ ಕಾನೂನಿನಿಂದ ಆಕೆಯು ಬಿಡುಗಡೆಯಾಗಿದ್ದಾಳೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಕ್ಕೆ ದೃಷ್ಟಾಂತ, ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು. ಗಂಡನು ಸತ್ತರೆ ಮದುವೆಯ ನಿಯಮದಿಂದ ಅವಳು ಬಿಡುಗಡೆಯಾಗುತ್ತಾಳೆ.
Kannada BSI Bible 2016
ಗಂಡನಿರುವ ಸ್ತ್ರೀಯು ಅವನು ಬದುಕಿರುವ ತನಕ ನ್ಯಾಯಪ್ರಮಾಣದಿಂದ ಅವನಿಗೆ ಕಟ್ಟಲ್ಪಟ್ಟಿದ್ದಾಳೆ; ಗಂಡನು ಸತ್ತರೆ ಆಕೆಯು ಅವನ ನ್ಯಾಯಪ್ರಮಾಣದಿಂದ ಬಿಡುಗಡೆಯಾಗಿ ದ್ದಾಳೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ದೃಷ್ಟಾಂತ - ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು; ಗಂಡನು ಸತ್ತರೆ ಗಂಡನ ಹಂಗು ಆಕೆಗೆ ತಪ್ಪುವದು.
Kannada Bible (KNCL) BSI 2016
ಉದಾಹರಣೆಗೆ, ಪತಿಯು ಬದುಕಿರುವವರೆಗೆ ಸತಿ ಅವನಿಗೆ ಶಾಸನಾನುಸಾರವಾಗಿ ಬದ್ಧಳು. ಒಂದು ವೇಳೆ, ಆಕೆಯ ಪತಿ ಸತ್ತುಹೋದರೆ, ಆಕೆ ವಿವಾಹಬಂಧನದಿಂದ ಬಿಡುಗಡೆ ಹೊಂದುತ್ತಾಳೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಬ್ಬ ಮದುವೆಯಾದ ಹೆಣ್ಣು ಮಗಳು ಕಾನೂನಿಗನುಸಾರವಾಗಿ ಅವಳ ಪತಿಯು ಜೀವದಿಂದಿರುವ ತನಕ ಮಾತ್ರ ಅವನಿಗೆ ಬದ್ಧಳಾಗಿರುತ್ತಾಳೆ. ಆದರೆ ಪತಿಯು ಸತ್ತರೆ ಆಕೆಯು ಮದುವೆಯ ಕಾನೂನಿನಿಂದ ಬಿಡುಗಡೆ ಹೊಂದಿದವಳಾಗಿರುತ್ತಾಳೆ.