Romans 8:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ನಿರೀಕ್ಷೆಯಿಂದಲೇ ನಾವು ರಕ್ಷಣೆಯನ್ನು ಹೊಂದಿದವರಾಗಿದ್ದೇವೆ. ನಾವು ನಿರೀಕ್ಷಿಸುವುದು ಪ್ರತ್ಯಕ್ಷವಾಗಿದ್ದರೆ ಅದನ್ನು ನಿರೀಕ್ಷೆ ಎನ್ನುವುದಿಲ್ಲ; ಪ್ರತ್ಯಕ್ಷವಾಗಿರುವುದನ್ನು ಯಾರಾದರೂ ನಿರೀಕ್ಷಿಸುವುದುಂಟೇ?
Kannada BSI Bible 2016
ನಾವು ನಿರೀಕ್ಷೆಯಿಂದ ರಕ್ಷಣೆಯನ್ನು ಹೊಂದುವವ ರಾಗಿದ್ದೇವೆ; ಕಾಣುವಂಥ ನಿರೀಕ್ಷೆಯು ನಿರೀಕ್ಷೆಯಲ್ಲ; ಒಬ್ಬನು ಎದುರು ನೋಡುವದು ಪ್ರತ್ಯಕ್ಷವಾಗಿದ್ದರೆ ಇನ್ನು ನಿರೀಕ್ಷಿಸುವದು ಯಾಕೆ?
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ರಕ್ಷಣೆಯನ್ನು ಹೊಂದಿದವರಾದರೂ ಇನ್ನು ಎದುರುನೋಡುವವರಾಗಿದ್ದೇವೆ. ಎದುರುನೋಡುವ ಪದವಿ ಪ್ರತ್ಯಕ್ಷವಾಗಿದ್ದರೆ ಎದುರುನೋಡುವದೇಕೆ? ಪ್ರತ್ಯಕ್ಷವಾದದ್ದನ್ನು ಎದುರುನೋಡುವದುಂಟೇ?
Kannada Bible (KNCL) BSI 2016
ನಾವು ಜೀವೋದ್ಧಾರ ಹೊಂದಿದ್ದರೂ ಇನ್ನೂ ನಿರೀಕ್ಷಿಸುವವರಾಗಿದ್ದೇವೆ. ನಾವು ನಿರೀಕ್ಷಿಸುವುದು ಪ್ರತ್ಯಕ್ಷವಾಗಿದ್ದರೆ ಅದನ್ನು ನಿರೀಕ್ಷೆ ಎನ್ನುವುದಿಲ್ಲ; ಪ್ರತ್ಯಕ್ಷವಾಗಿರುವುದನ್ನು ಯಾರಾದರೂ ನಿರೀಕ್ಷಿಸುವುದುಂಟೇ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ನಿರೀಕ್ಷೆಯಿಂದಲೇ ನಾವು ರಕ್ಷಣೆಯನ್ನು ಹೊಂದಿದವರಾಗಿದ್ದೇವೆ. ಆದರೆ ಕಣ್ಣಿಗೆ ಕಾಣುವ ನಿರೀಕ್ಷೆಯು ನಿರೀಕ್ಷೆಯೇ ಅಲ್ಲ. ಕಾಣುತ್ತಿರುವುದನ್ನು ಯಾರಾದರೂ ನಿರೀಕ್ಷಿಸುವರೋ?