Romans 8:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವರು ತಾನು ಜಗತ್ತನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಆ ಜನರನ್ನು ಬಲ್ಲವನಾಗಿದ್ದನು ಮತ್ತು ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂದು ನಿರ್ಧರಿಸಿದನು. ಹೀಗಿರಲಾಗಿ, ಅನೇಕ ಸಹೋದರ ಸಹೋದರಿಯರಲ್ಲಿ ಯೇಸುವೇ ಹಿರಿಯವನಾಗಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡನೋ ಅವರನ್ನು ತನ್ನ ಮಗನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದನು.
Kannada BSI Bible 2016
ಆತನು ಅನೇಕ ಸಹೋದರರಲ್ಲಿ ತನ್ನ ಮಗನು ಜ್ಯೇಷ್ಠಪುತ್ರನಾಗಿರಬೇಕೆಂದು ತಾನು ಯಾರನ್ನು ಮೊದಲು ತಿಳುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವಂತೆ ಮೊದಲೇ ನೇಮಿಸಿ ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಕಂದರೆ ದೇವರು ತನ್ನ ಮಗನಿಗೆ ಅನೇಕ ಮಂದಿ ಸಹೋದರರಿದ್ದು ಅವರಲ್ಲಿ ಆತನೇ ಹಿರಿಯನಾಗಿರಬೇಕೆಂದು ಉದ್ದೇಶಿಸಿ ತಾನು ಯಾರನ್ನು ತನ್ನವರೆಂದು ಮೊದಲು ತಿಳುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವದಕ್ಕೆ ಮೊದಲೇ ನೇವಿುಸಿದನು.
Kannada Bible (KNCL) BSI 2016
ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋಅವರನ್ನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನೇಕ ಸಹೋದರರ ಮಧ್ಯೆ ಜ್ಯೇಷ್ಠಪುತ್ರನೆನಿಸುವಂತೆ ದೇವರು ಯಾರನ್ನು ಮೊದಲು ತಿಳಿದುಕೊಂಡರೋ ಅವರನ್ನು ತಮ್ಮ ಪುತ್ರನ ಹೋಲಿಕೆಗೆ ಸಮಾನರಾಗುವಂತೆ ಮುಂದಾಗಿ ನೇಮಿಸಿದರು.