Romans 9:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕುಂಬಾರನು ತನಗೆ ಇಷ್ಟಬಂದಂತೆ ಒಂದೇ ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸುವುದಿಲ್ಲವೇ? ಅವನು ಒಂದನ್ನು ವಿಶೇಷವಾದ ಬಳಕೆಗಾಗಿಯೂ ಮತ್ತೊಂದನ್ನು ದೈನಂದಿನ ಬಳಕೆಗಾಗಿಯೂ ತಯಾರಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ, ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮಣ್ಣಿನ ಮುದ್ದೆಯಿಂದ ಮಾಡುವುದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?
Kannada BSI Bible 2016
ಒಂದು ಪಾತ್ರೆಯನ್ನು ಗೌರ ವಕ್ಕೂ ಇನ್ನೊಂದನ್ನು ಅಗೌರವಕ್ಕೂ ಒಂದೇ ಮುದ್ದೆ ಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮುದ್ದೆಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?
Kannada Bible (KNCL) BSI 2016
ಒಂದೇ ಮಣ್ಣಿನ ಮುದ್ದೆಯಿಂದ ಎರಡು ಕುಡಿಕೆಗಳನ್ನು ಅಂದರೆ ಒಂದನ್ನು ವಿಶೇಷ ಬಳಕೆಗೂ ಇನ್ನೊಂದನ್ನು ಸಾಮಾನ್ಯ ಬಳಕೆಗೂ ಮಾಡುವ ಅಧಿಕಾರ ಕುಂಬಾರನಿಗೆ ಇಲ್ಲವೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕುಂಬಾರನಿಗೆ ಒಂದೇ ಮಣ್ಣಿನ ರಾಶಿಯಿಂದ ಒಂದನ್ನು ಉತ್ತಮವಾದ ಪಾತ್ರೆಯನ್ನಾಗಿಯೂ ಮತ್ತೊಂದನ್ನು ಸಾಮಾನ್ಯವಾದ ಪಾತ್ರೆಯನ್ನಾಗಿಯೂ ಮಾಡುವ ಅಧಿಕಾರ ಇಲ್ಲವೋ?