Romans 9:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏಕೆಂದರೆ ಕ್ರಿಯೆಗಳ ಮೂಲಕ ನೀತಿವಂತರಾಗಲು ಅವರು ಪ್ರಯತ್ನಿಸಿದರೇ ಹೊರತು ನಂಬಿಕೆಯನ್ನು ಆಧಾರ ಮಾಡಿಕೊಳ್ಳಲಿಲ್ಲ. ಜನರನ್ನು ಬೀಳಿಸುವ ಕಲ್ಲಿನ ಮೇಲೆ ಅವರು ಬಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಅನುಸರಿಸದೆ ನೇಮನಿಷ್ಠೆಗಳನ್ನು ಹಿಂಬಾಲಿಸಿದ್ದರಿಂದ,
Kannada BSI Bible 2016
ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಆಧಾರಮಾಡಿಕೊಳ್ಳದೆ ನ್ಯಾಯ ಪ್ರಮಾಣದ ಕ್ರಿಯೆಗಳನ್ನು ಆಧಾರಮಾಡಿಕೊಂಡದ್ದೇ ಕಾರಣ.ಇಗೋ, ನಾನು ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇ ನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾ ಭಂಗಪಡುವದಿಲ್ಲವೆಂತಲೂ ಬರೆದಿರುವ ಪ್ರಕಾರ ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು ಎಂಬದೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಆಧಾರಮಾಡಿಕೊಳ್ಳದೆ ನೇಮನಿಷ್ಠೆಗಳನ್ನು ಆಧಾರಮಾಡಿಕೊಂಡದ್ದೇ ಕಾರಣ.
Kannada Bible (KNCL) BSI 2016
ಆದ್ದರಿಂದಲೇ ಅವರು ಎಡವುಕಲ್ಲನ್ನು ಎಡವಿಬಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆ? ಏಕೆಂದರೆ ಅವರು ನಂಬಿಕೆಯನ್ನು ಅನುಸರಿಸದೆ ಕೃತ್ಯಗಳನ್ನು ಅನುಸರಿಸಿದ್ದರಿಂದಲೇ. ಅವರು ಎಡವುಕಲ್ಲನ್ನು ಎಡವಿದರು.