Ruth 2:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ರೂತಳು ಎದ್ದು ಪುನಃ ಕೆಲಸಕ್ಕೆ ಹೋದಳು. ಆಗ ಬೋವಜನು ತನ್ನ ಸೇವಕರಿಗೆ, “ರೂತಳು ಕಣದಲ್ಲಿರುವ ಸಿವುಡುಗಳ ಸುತ್ತಲೂ ಹಕ್ಕಲು ಆರಿಸಿಕೊಳ್ಳಲಿ; ಅವಳನ್ನು ತಡೆಯಬೇಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತರುವಾಯ ತಿರುಗಿ ಹಕ್ಕಲಾಯುವುದಕ್ಕೆ ಏಳಲು ಬೋವಜನು ತನ್ನ ಸೇವಕರಿಗೆ, “ಈಕೆಯು ಸಿವುಡುಗಳ ಮಧ್ಯದಲ್ಲಿ ಹಕ್ಕಲಾಯ್ದುಕೊಳ್ಳಲಿ, ಅಡ್ಡಿ ಮಾಡಬೇಡಿರಿ;
Kannada BSI Bible 2016
ಅವಳು ಹಕ್ಕಲಾದುಕೊಳ್ಳಲು ಏಳುವಾಗ ಬೋವ ಜನು ತನ್ನ ಯುವಕರಿಗೆ ಆಜ್ಞಾಪಿಸಿ ಇವಳು ಕೊಯಿದ ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ. ನೀವು ಅವಳನ್ನು ನಿಂದಿಸಬೇಡಿರಿ;
Kannada BSI JV (ಕನ್ನಡ ಸತ್ಯವೇದವು J.V. (BSI))
ತರುವಾಯ ತಿರಿಗಿ ಹಕ್ಕಲಾಯುವದಕ್ಕೆ ಏಳಲು ಬೋವಜನು ತನ್ನ ಸೇವಕರಿಗೆ - ಈಕೆಯು ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ, ಬೈಯಬೇಡಿರಿ;
Kannada Bible (KNCL) BSI 2016
ಅವಳು ಪುನಃ ಹಕ್ಕಲು ತೆನೆಗಳನ್ನು ಆರಿಸಿಕೊಳ್ಳಲು ಹೋದಾಗ, ಬೋವಜನು ತನ್ನ ಆಳುಗಳಿಗೆ, “ಸಿವುಡುಗಳ ಮಧ್ಯದಲ್ಲೂ ಅವಳು ತೆನೆಗಳನ್ನು ಆರಿಸಿಕೊಳ್ಳಲಿ; ಅಡ್ಡಿಮಾಡಬೇಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳು ಹಕ್ಕಲಾದುಕೊಳ್ಳಲು ಏಳುವಾಗ ಬೋವಜನು ತನ್ನ ಸೇವಕರಿಗೆ ಆಜ್ಞಾಪಿಸಿ, “ಇವಳು ಕೊಯ್ದ ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ. ನೀವು ಅವಳನ್ನು ಬೈಯಬೇಡಿರಿ.