Ruth 2:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೊವೊಮಿಯು ತನ್ನ ಸೊಸೆಗೆ, “ಯೆಹೋವನು ಅವನಿಗೆ ಕೃಪೆತೋರಲಿ. ಯೆಹೋವನು ಸತ್ತುಹೋದವರಿಗೂ ಬದುಕಿರುವವರಿಗೂ ದಯೆತೋರಿಸುತ್ತಾನೆ” ಎಂದು ಹೇಳಿದಳು. ಆಮೇಲೆ ನೊವೊಮಿಯು ತನ್ನ ಸೊಸೆಗೆ, “ಬೋವಜನು ನಮ್ಮ ಸಂಬಂಧಿಗಳಲ್ಲೊಬ್ಬನಲ್ಲದೆ ನಮ್ಮ ಸಮೀಪದ ಬಂಧುವೂ ನಮ್ಮ ಸಂರಕ್ಷಕನೂ ಆಗಿದ್ದಾನೆ” ಎಂದು ತಿಳಿಸಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ನವೊಮಿಯು “ಸತ್ತವರಿಗೂ, ಬದುಕುವವರಿಗೂ ಮಾಡಿದ ವಾಗ್ದಾನಗಳನ್ನು ನೆರವೇರಿಸುವ ಯೆಹೋವನು ಆತನನ್ನು ಆಶೀರ್ವದಿಸಲಿ” ಎಂದು ಹರಸಿ, “ಆ ಮನುಷ್ಯನು ನಮಗೆ ಹತ್ತಿರದ ನೆಂಟ, ಪೋಷಿಸಬೇಕಾದವನು” ಎಂದು ರೂತಳಿಗೆ ತಿಳಿಸಿದಳು.
Kannada BSI Bible 2016
ನೊವೊಮಿ ತನ್ನ ಸೊಸೆಗೆಜೀವಿಸಿರುವವರಿಗೋಸ್ಕರವೂ ಸತ್ತವರಿಗೋಸ್ಕರವೂ ಮಾಡಿದ ಕೃಪೆಯನ್ನು ಬಿಡದೆ ಇರುವವನು ಕರ್ತ ನಿಂದ ಆಶೀರ್ವದಿಸಲ್ಪಡಲಿ ಅಂದಳು. ನೊವೊಮಿ ಅವಳಿಗೆ ಆ ಮನುಷ್ಯನು ನಮ್ಮ ಸಂಬಂಧಿಕನಾಗಿಯೂ ವಿಮೋಚಿಸತಕ್ಕ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ನೊವೊವಿುಯು - ಸತ್ತವರಿಗೂ ಬದುಕುವವರಿಗೂ ಬಿಡದೆ ದಯೆತೋರಿಸುತ್ತಿರುವ ಇವನು ಯೆಹೋವನಿಂದ ಆಶೀರ್ವಾದ ಹೊಂದಲಿ ಎಂದು ಹೇಳಿ, ಆ ಮನುಷ್ಯನು ತಮ್ಮ ಸಂಬಂಧಿಕನೆಂದೂ ಸಮೀಪಬಂಧುಗಳಲ್ಲೊಬ್ಬನೆಂದೂ ರೂತಳಿಗೆ ತಿಳಿಸಿದಳು.
Kannada Bible (KNCL) BSI 2016
ಇದನ್ನು ಕೇಳಿದ ನವೊಮಿ ಆವೇಶದಿಂದ, “ಜೀವಂತರಿಗೂ ಮೃತರಿಗೂ ಮಾಡಿದ ವಾಗ್ದಾನಗಳನ್ನು ನೆರವೇರಿಸುವ ಸರ್ವೇಶ್ವರ ಅವನನ್ನು ಆಶೀರ್ವದಿಸಲಿ!” ಎಂದು ಹರಸಿ, “ಆ ಮನುಷ್ಯ ನಮಗೆ ಹತ್ತಿರದ ನೆಂಟ, ನಮ್ಮನ್ನು ಪೋಷಿಸಬೇಕಾದವನು,” ಎಂದು ತಿಳಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೊವೊಮಿ ತನ್ನ ಸೊಸೆಗೆ, “ಜೀವಂತ ಇರುವವರಿಗೂ ಸತ್ತವರಿಗೂ ದಯೆ ತೋರಿಸುತ್ತಿರುವ ಯೆಹೋವ ದೇವರಿಂದ ಅವನಿಗೆ ಆಶೀರ್ವಾದವಾಗಲಿ,” ಎಂದಳು. ಅನಂತರ ನೊವೊಮಿ ಅವಳಿಗೆ, “ಆ ಮನುಷ್ಯನು ನಮ್ಮ ಬಂಧುವೂ ವಿಮೋಚಿಸತಕ್ಕ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ,” ಎಂದಳು.