Ruth 2:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದಕ್ಕೆ ರೂತಳು, “ಸುಗ್ಗಿಕಾಲ ಮುಗಿಯುವವರೆಗೂ ತನ್ನ ಹೆಣ್ಣಾಳುಗಳ ಜೊತೆಯಲ್ಲಿಯೇ ಹೋಗಬೇಕೆಂದು ಬೋವಜನು ನನಗೆ ಹೇಳಿದ್ದಾನೆ” ಎಂದು ಹೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಮೋವಾಬ್ಯಳಾದ ರೂತಳು “ಇದಲ್ಲದೆ ಆ ಮನುಷ್ಯನು ನನಗೆ, ‘ಸುಗ್ಗಿ ಮುಗಿಯುವವರೆಗೂ ನನ್ನ ಆಳುಗಳ ಜೊತೆಯಲ್ಲೇ ಇರು ಎಂದು ಹೇಳಿದ್ದಾನೆ’” ಎಂದಳು.
Kannada BSI Bible 2016
ಅದಕ್ಕೆ ಮೋವಾಬ್ಯಳಾದ ರೂತಳು ಅವನು, ನನ್ನ ಪೈರೆಲ್ಲಾ ಕೊಯಿದು ತೀರುವ ವರೆಗೂ ನೀನು ನನ್ನ ಕೆಲಸದವರ ಸಂಗಡ ಕೂಡಿ ಕೊಂಡಿರು ಎಂದು ನನಗೆ ಹೇಳಿದನು ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಮೋವಾಬ್ಯಳಾದ ರೂತಳು - ಇದಲ್ಲದೆ ಆ ಮನುಷ್ಯನು ನನಗೆ - ಸುಗ್ಗಿಯೆಲ್ಲಾ ತೀರುವವರೆಗೂ ನನ್ನ ಆಳುಗಳ ಜೊತೆಯಲ್ಲೇ ಇರು ಎಂದು ಹೇಳಿದ್ದಾನೆ ಅನ್ನಲು
Kannada Bible (KNCL) BSI 2016
ಇದಲ್ಲದೆ ರೂತಳು, “ಸುಗ್ಗಿಕಾಲ ತೀರುವವರೆಗೂ ನನ್ನ ಆಳುಗಳ ಜೊತೆಯಲ್ಲೇ ಇರಬಹುದೆಂದು ಹೇಳಿದ್ದಾನೆ,” ಎಂದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಮೋವಾಬ್ಯಳಾದ ರೂತಳು, “ಅವನು, ‘ನನ್ನ ಪೈರೆಲ್ಲಾ ಕೊಯ್ದು ತೀರುವವರೆಗೂ, ನೀನು ನನ್ನ ಕೆಲಸದವರ ಸಂಗಡ ಕೂಡಿಕೊಂಡಿರು’ ಎಂದು ನನಗೆ ಹೇಳಿದನು,” ಎಂದಳು.