Ruth 2:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರೂತಳು ಬೋವಜನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಗೋಧಿಯ ಮತ್ತು ಜವೆಗೋಧಿಯ ಸುಗ್ಗಿಕಾಲ ಮುಗಿಯುವವರೆಗೂ ಹಕ್ಕಲಾಯುತ್ತಿದ್ದಳು. ರೂತಳು ತನ್ನ ಅತ್ತೆಯಾದ ನೊವೊಮಿಯ ಸಂಗಡ ಮನೆಯಲ್ಲಿದ್ದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರಂತೆಯೇ ರೂತಳು ಅತ್ತೆಯ ಜೊತೆಯಲ್ಲಿದ್ದುಕೊಂಡು ಜವೆಗೋದಿಯ ಮತ್ತು ಗೋದಿಯ ಸುಗ್ಗಿ ಮುಗಿಯುವ ವರೆಗೆ ಬೋವಜನ ಹೆಣ್ಣಾಳುಗಳ ಸಂಗಡಲೇ ಹೋಗಿ ಹಕ್ಕಲಾಯುತ್ತಿದ್ದಳು.
Kannada BSI Bible 2016
ಹೀಗೆ ಅವಳು ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದು ಹಾಗೆಯೇ ಜವೆಗೋಧಿಯ ಸುಗ್ಗಿಯು ತೀರುವ ವರೆಗೆ ಹಕ್ಕಲಾದುಕೊಳ್ಳುವದ ಕ್ಕೋಸ್ಕರ ಬೋವಜನ ದಾಸಿಗಳ ಸಂಗಡ ಕೂಡಿ ಕೊಂಡು ಹೋಗುತ್ತಿದ್ದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರಂತೆಯೇ ರೂತಳು ಅತ್ತೆಯ ಮನೆಯಲ್ಲಿದ್ದುಕೊಂಡು ಜವೆಗೋದಿಯ ಮತ್ತು ಗೋದಿಯ ಸುಗ್ಗಿ ತೀರುವವರೆಗೆ ಬೋವಜನ ಹೆಣ್ಣಾಳುಗಳ ಸಂಗಡಲೇ ಹೋಗಿ ಹಕ್ಕಲಾಯುತ್ತಿದ್ದಳು.
Kannada Bible (KNCL) BSI 2016
ಅದರಂತೆಯೆ ರೂತಳು ಜವೆಗೋದಿ ಮತ್ತು ಗೋದಿಯ ಸುಗ್ಗಿ ಮುಗಿಯುವವರೆಗೂ ಬೋವಜನ ಹೆಣ್ಣಾಳುಗಳ ಸಂಗಡ ತೆನೆಗಳನ್ನು ಆಯ್ದುಕೊಳ್ಳುತ್ತಾ ಇದ್ದಳು. ಅತ್ತೆಯ ಮನೆಯಲ್ಲೇ ವಾಸಿಸುತ್ತಿದ್ದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಅವಳು ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದು ಹಾಗೆಯೇ ಜವೆಗೋಧಿಯ ಸುಗ್ಗಿಯು ತೀರುವವರೆಗೆ ಹಕ್ಕಲಾದುಕೊಳ್ಳುವುದಕ್ಕೋಸ್ಕರ ಬೋವಜನ ದಾಸಿಗಳ ಸಂಗಡ ಕೂಡಿಕೊಂಡು ಹೋಗುತ್ತಿದ್ದಳು.