Ruth 2:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೊವೊಮಿಯು, “ಆಗಲಿ ಮಗಳೇ, ಹಾಗೆಯೇ ಮಾಡು” ಅಂದಳು. ರೂತಳು ಹೊಲಗಳಿಗೆ ಹೋದಳು. ಅವಳು ಅಲ್ಲಿ ಫಸಲು ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾಯುತ್ತಾ ಎಲೀಮೆಲೆಕನ ಗೋತ್ರದವನಾದ ಬೋವಜನ ಹೊಲಕ್ಕೆ ಬಂದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯು ದೈವಯೋಗದಿಂದ ಎಲೀಮೆಲೆಕನ ಗೋತ್ರದವನಾದ ಬೋವಜನ ಸ್ವತ್ತಾಗಿದ್ದ ಹೊಲಕ್ಕೆ ಹೋಗಿ ತೆನೆ ಕೊಯ್ಯುವವರ ಹಿಂದಿನಿಂದ ಹಕ್ಕಲಾಯುತ್ತಾ ಇದ್ದಳು.
Kannada BSI Bible 2016
ಅವಳು ಹೋಗಿ ಹೊಲದಲ್ಲಿ ಕೊಯ್ಯುವವರ ಹಿಂದೆ ಹಕ್ಕಲಾದು ಕೊಂಡಳು. ಅವಳಿಗೆ ಪ್ರಾಪ್ತಿಸಿದ ಆ ಹೊಲದ ಭಾಗ ಎಲೀಮೆಲೆಕನ ಸಂಬಂಧಿಕನಾದ ಬೋವಜನದಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕವಳು - ನನ್ನ ಮಗಳೇ, ಹೋಗು ಎನ್ನಲು ಆಕೆಯು ದೈವಯೋಗದಿಂದ ಎಲೀಮೆಲೆಕನ ಗೋತ್ರದವನಾದ ಬೋವಜನ ಸ್ವಾಸ್ತ್ಯವಾಗಿದ್ದ ಹೊಲಕ್ಕೆ ಹೋಗಿ ಕೊಯ್ಯುವವರ ಹಿಂದಿನಿಂದ ಹಕ್ಕಲಾಯುತ್ತಾ ಇದ್ದಳು.
Kannada Bible (KNCL) BSI 2016
ರೂತಳು ಕೊಯ್ಯುವವರ ಹಿಂದೆ ಹೋಗುತ್ತಾ ಅಲ್ಲಲ್ಲಿ ಬಿದ್ದ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಸುದೈವದಿಂದ ಅದು ಎಲಿಮೆಲೆಕನ ನೆಂಟನಾದ ಬೋವಜನ ಹೊಲವಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೂತಳು ಹೊಲದಲ್ಲಿ ಕೊಯ್ಯುವವರ ಹಿಂದೆ ಹೋಗಿ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಆ ಹೊಲದ ಭಾಗ ಎಲೀಮೆಲೆಕನ ಕುಲದವನಾದ ಬೋವಜನದಾಗಿತ್ತು.