Ruth 2:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ತರುವಾಯ ಬೋವಜನು ಬೆತ್ಲೆಹೇಮಿನಿಂದ ಹೊಲಕ್ಕೆ ಬಂದನು. ಅವನು ಕೆಲಸಗಾರರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಎಂದು ಹರಸಿದನು. ಆ ಕೆಲಸಗಾರರು, “ಯೆಹೋವನು ನಿನಗೆ ಕೃಪೆ ತೋರಲಿ” ಎಂದು ಉತ್ತರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಬೋವಜನು ಬೇತ್ಲೆಹೇಮಿನಿಂದ ಹೊಲಕ್ಕೆ ಬಂದು ಕೊಯ್ಯುವವರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಅಂದನು. ಅವರು, “ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಎಂದು ಹರಸಿದರು.
Kannada BSI Bible 2016
ಇಗೋ, ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ ಕರ್ತನು ನಿಮ್ಮ ಸಂಗಡ ಇರಲಿ ಅಂದನು. ಅದಕ್ಕೆ ಅವರು ಕರ್ತನು ನಿನ್ನನ್ನು ಆಶೀರ್ವ ದಿಸಲಿ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಬೋವಜನು ಬೇತ್ಲೆಹೇವಿುನಿಂದ ಹೊಲಕ್ಕೆ ಬಂದು ಕೊಯ್ಯುವವರಿಗೆ - ಯೆಹೋವನು ನಿಮ್ಮ ಸಂಗಡ ಇರಲಿ ಅಂದನು. ಅವರು - ಯೆಹೋವನು ನಿನ್ನನ್ನು ಆಶೀರ್ವದಿಸಲಿ ಎಂದು ಹರಸಿದರು.
Kannada Bible (KNCL) BSI 2016
ಸ್ವಲ್ಪ ಹೊತ್ತಾದ ಮೇಲೆ, ಇದ್ದಕ್ಕಿದ್ದ ಹಾಗೆ ಬೋವಜನು ಬೆತ್ಲೆಹೇಮಿನಿಂದ ಅಲ್ಲಿಗೆ ಬಂದನು. ಅವನು, “ಸರ್ವೇಶ್ವರಸ್ವಾಮಿ ನಿಮ್ಮೊಡನೆ ಇರಲಿ!” ಎಂದು ಕೆಲಸದಾಳುಗಳನ್ನು ವಂದಿಸಿದನು. ಅದಕ್ಕೆ ಅವರು, “ಸರ್ವೇಶ್ವರ ನಿಮ್ಮನ್ನೂ ಹರಸಲಿ!” ಎಂದು ಪ್ರತಿವಂದನೆ ಮಾಡಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ, “ಯೆಹೋವ ದೇವರು ನಿಮ್ಮ ಸಂಗಡ ಇರಲಿ,” ಎಂದನು. ಅದಕ್ಕೆ ಅವರು, “ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,” ಎಂದರು.