Ruth 2:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಬೋವಜನು ರೂತಳಿಗೆ, “ಮಗಳೇ, ನೀನು ನನ್ನ ಹೊಲದಲ್ಲಿಯೇ ಧಾನ್ಯವನ್ನು ಶೇಖರಿಸು. ನೀನು ಬೇರೆಯವರ ಹೊಲಕ್ಕೆ ಹೋಗುವ ಅವಶ್ಯಕತೆಯಿಲ್ಲ. ನನ್ನ ಹೆಣ್ಣಾಳುಗಳ ಹಿಂದೆಯೇ ನೀನು ಹೋಗುತ್ತಿರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಬೋವಜನು ರೂತಳಿಗೆ, “ನನ್ನ ಮಗಳೇ, ಕೇಳು; ನನ್ನ ಹೊಲವನ್ನು ಬಿಟ್ಟು ಬೇರೆಯವರ ಹೊಲಕ್ಕೆ ಹೋಗಬೇಡ; ನನ್ನ ಹೆಣ್ಣಾಳುಗಳ ಜೊತೆಯಲ್ಲೇ ಇರು.
Kannada BSI Bible 2016
ಆಗ ಬೋವಜನು ರೂತಳಿಗೆ ನನ್ನ ಮಗಳೇ, ನನ್ನ ಮಾತು ಕೇಳುತ್ತೀಯಾ? ನೀನು ಹಕ್ಕಲಾದುಕೊಳ್ಳಲು ಅನ್ಯರ ಹೊಲಕ್ಕೆ ಹೋಗದೆ, ಈ ಸ್ಥಳವನ್ನು ಬಿಟ್ಟು ಹೊರಡದೆ, ಇಲ್ಲಿಯೇ ನನ್ನ ದಾಸಿಗಳ ಸಂಗಡ ಕೂಡಿಕೊಂಡಿರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಬೋವಜನು ರೂತಳಿಗೆ - ನನ್ನ ಮಗಳೇ, ಕೇಳು; ನನ್ನ ಹೊಲವನ್ನು ಬಿಟ್ಟು ಬೇರೆಯವರ ಹೊಲಕ್ಕೆ ಹೋಗಬೇಡ; ನನ್ನ ಹೆಣ್ಣಾಳುಗಳ ಜೊತೆಯಲ್ಲೇ ಇದ್ದುಕೊಂಡು
Kannada Bible (KNCL) BSI 2016
ತದನಂತರ ಬೋವಜನು ರೂತಳಿಗೆ, “ನೋಡಮ್ಮಾ, ಈ ಹೊಲವನ್ನು ಬಿಟ್ಟು ಮತ್ತೆ ಎಲ್ಲಿಯೂ ತೆನೆ ಆಯಲು ಹೋಗಬೇಕಾಗಿಲ್ಲ, ನನ್ನ ಹೆಣ್ಣಾಳುಗಳ ಜೊತೆಯಲ್ಲಿಯೇ ಇರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಬೋವಜನು ರೂತಳಿಗೆ, “ನನ್ನ ಮಗಳೇ, ನನ್ನ ಮಾತನ್ನು ಕೇಳು. ನೀನು ಹಕ್ಕಲಾದುಕೊಳ್ಳಲು ಬೇರೆಯವರ ಹೊಲಕ್ಕೆ ಹೋಗದೆ, ಈ ಸ್ಥಳವನ್ನು ಬಿಟ್ಟು ಹೊರಡದೆ, ಇಲ್ಲಿಯೇ ನನ್ನ ದಾಸಿಗಳ ಜೊತೆಯಲ್ಲಿಯೇ ಇರು.