Ruth 3:9 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನೀನು ಯಾರು?” ಎಂದು ಬೋವಜನು ಕೇಳಿದನು. “ನಾನು ನಿಮ್ಮ ದಾಸಿಯಾದ ರೂತಳು. ನೀನು ನನ್ನ ಸಂರಕ್ಷಕ. ನಿನ್ನ ಹೊದಿಕೆಯನ್ನು ನನ್ನ ಮೇಲೆ ಹಾಕು” ಎಂದು ಅವಳು ಬೇಡಿಕೊಂಡಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೆದರಿ ಆಕೆಯನ್ನು “ನೀನು ಯಾರು?” ಎಂದು ಕೇಳಲು ಆಕೆಯು “ನಾನು ನಿನ್ನ ದಾಸಿಯಾದ ರೂತಳು, ನೀನು ಸಮೀಪಬಂಧುವಾಗಿರುವುದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು” ಅಂದಳು.
Kannada BSI Bible 2016
ಆಗ ಅವನು ನೀನು ಯಾರು ಅಂದನು. ಅದಕ್ಕವಳು ನಾನು ನಿನ್ನ ದಾಸಿಯಾದ ರೂತಳು; ನೀನು ನಿನ್ನ ದಾಸಿಯ ಮೇಲೆ ನಿನ್ನ ಅಂಚನ್ನು ಹರಡು; ಯಾಕಂದರೆ ನೀನು ಹತ್ತಿರ ಸಂಬಂಧಿಕನು ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಆಕೆಯನ್ನು - ನೀನು ಯಾರು ಎಂದು ಕೇಳಲು ಆಕೆಯು - ನಾನು ನಿನ್ನ ದಾಸಿಯಾದ ರೂತಳು. ನೀನು ಸಮೀಪಬಂಧುವಾಗಿರುವದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು ಅಂದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು, “ನೀನು ಯಾರು?” ಎಂದನು. ಅದಕ್ಕವಳು, “ನಾನು ನಿಮ್ಮ ದಾಸಿಯಾದ ರೂತಳು. ನೀವು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿರಿ. ಏಕೆಂದರೆ ನೀವು ನನ್ನನ್ನು ವಿಮೋಚಿಸತಕ್ಕ ಹತ್ತಿರ ಸಂಬಂಧಿಕನು,” ಎಂದಳು.