Ruth 4:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದಕ್ಕೆ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಂಡರೆ ಸತ್ತವನ ಹೆಂಡತಿಯೂ ಮೋವಾಬ್ಯಳೂ ಆಗಿರುವ ರೂತಳನ್ನು ಸಹ ನೀನು ಮದುವೆಯಾಗಬೇಕು. ರೂತಳಿಗೆ ಜನಿಸುವ ಮಗನು ಆ ಹೊಲಕ್ಕೆ ಹಕ್ಕುದಾರನಾಗುವನು. ಹೀಗೆ ಈ ಭೂಮಿಯು ಸತ್ತು ಹೋದವನ ಕುಟುಂಬದಲ್ಲಿಯೇ ಇದ್ದು ಅವನ ಹೆಸರಿನಲ್ಲಿಯೇ ಮುಂದುವರಿಯುವುದು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಬೋವಜನು “ನೀನು ನವೊಮಿಯಿಂದ ಆ ಹೊಲವನ್ನು ತೆಗೆದುಕೊಳ್ಳುವ ದಿನದಲ್ಲಿ, ಹೊಲದ ಖಾತೆಯೂ ಆಕೆಯ ಸತ್ತುಹೋದ ಮಗನ ಹೆಸರಿನಲ್ಲೇ ಉಳಿಯುದಿರುವಂತೆ, ಅವನ ಹೆಂಡತಿ ಮೋವಾಬ್ಯಳಾದ ರೂತಳನ್ನೂ ತೆಗೆದುಕೊಳ್ಳಬೇಕು” ಎಂದು ತಿಳಿಸಿದನು.
Kannada BSI Bible 2016
ಅದಕ್ಕೆ ಅವನು ನಾನು ಬಿಡಿಸಿಕೊಳ್ಳುವೆನು ಅಂದನು. ಆಗ ಬೋವಜನು ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡು ಕೊಳ್ಳುವ ದಿವಸದಲ್ಲಿ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡುವ ಹಾಗೆ ಅವನ ಹೆಂಡತಿಯಾಗಿರುವ ಮೋವಾಬ್ಯಳಾದ ರೂತ ಳಿಂದಲೂ ಅದನ್ನು ಕೊಂಡುಕೊಳ್ಳಬೇಕು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಬೋವಜನು - ನೀನು ನೊವೊವಿುಯಿಂದ ಆ ಹೊಲವನ್ನು ತೆಗೆದುಕೊಳ್ಳುವ ದಿನದಲ್ಲಿ ಹೊಲದ ಖಾತೆಯು ಆಕೆಯ ಸತ್ತುಹೋದ ಮಗನ ಹೆಸರಿನಲ್ಲೇ ಉಳಿಯುವಂತೆ ಅವನ ಹೆಂಡತಿಯೂ ಮೋವಾಬ್ ಸ್ತ್ರೀಯೂ ಆದ ರೂತಳನ್ನೂ ತೆಗೆದುಕೊಳ್ಳಬೇಕು ಎಂದು ತಿಳಿಸಲು
Kannada Bible (KNCL) BSI 2016
ಆಗ ಬೋವಜನು, “ನೀನು ಆ ಹೊಲವನ್ನು ಕೊಂಡುಕೊಳ್ಳುವುದಾದರೆ, ಅವಳ ಸೊಸೆಯಾದ ಮೋವಾಬದ ರೂತಳನ್ನು ನೀನು ಮದುವೆಯಾಗಬೇಕು. ಆಗ ಆ ಹೊಲದ ಖಾತೆ ಗತಿಸಿದ ಮಗನ ಹೆಸರಿನಲ್ಲೇ ಉಳಿಯುತ್ತದೆ,” ಎಂದು ತಿಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಳ್ಳುವ ದಿವಸದಲ್ಲಿ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡುವ ಹಾಗೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ತೆಗೆದುಕೊಳ್ಳಬೇಕು,” ಎಂದನು.