Song of Solomon 3:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗ ನಾನು ಎದ್ದು ನಗರದಲ್ಲೆಲ್ಲಾ ಸುತ್ತಾಡುವೆನು. ನನ್ನ ಪ್ರಿಯನಿಗಾಗಿ ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ಹುಡುಕುವೆನು. ನಾನು ಅವನಿಗಾಗಿ ಹುಡುಕಿದೆ. ಆದರೆ ಅವನು ಸಿಕ್ಕಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು, “ಎದ್ದು ಊರಿನಲ್ಲಿ ತಿರುಗುವೆನು, ಬೀದಿಗಳಲ್ಲಿಯೂ, ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು” ಅಂದುಕೊಂಡೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.
Kannada BSI Bible 2016
ನಾನು ಈಗ ಎದ್ದು ಪಟ್ಟಣವನ್ನು ಸಂಚರಿಸಿ ಬೀದಿ ಗಳಲ್ಲಿಯೂ ಮಾರ್ಗಗಳಲ್ಲಿಯೂ ನನ್ನ ಪ್ರಾಣಪ್ರಿಯ ನನ್ನು ಹುಡುಕುವೆನು. ಅವನನ್ನು ಹುಡುಕಿ ಕಾಣದೆ ಹೋದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಎದ್ದು ಊರಲ್ಲಿ ತಿರುಗುವೆನು, ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು ಎಂದುಕೊಂಡೆನು; ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.
Kannada Bible (KNCL) BSI 2016
ಎದ್ದು ಊರೆಲ್ಲಾ ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ. ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಎದ್ದು, ಪಟ್ಟಣವನ್ನು ಸಂಚರಿಸಿ, ಬೀದಿಗಳಲ್ಲಿಯೂ, ಮಾರ್ಗಗಳಲ್ಲಿಯೂ ನನ್ನ ಪ್ರಾಣ ಪ್ರಿಯನನ್ನು ಹುಡುಕಾಡಿದೆನು. ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲೇ ಇಲ್ಲ.