Song of Solomon 4:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ಪ್ರಿಯಳೇ, ನೀನು ಬಹಳ ಸುಂದರಿ! ನೀನು ರೂಪವತಿ! ಮುಸುಕಿನೊಳಗಿರುವ ನಿನ್ನ ಕಣ್ಣುಗಳು ಕೋಮಲವಾದ ಪಾರಿವಾಳಗಳಂತಿವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ಮುಸುಕಿನೊಳಗಿನ ನಿನ್ನ ನೇತ್ರಗಳು ಪಾರಿವಾಳಗಳು, ನಿನ್ನ ಕೂದಲು ಗಿಲ್ಯಾದ್ ಬೆಟ್ಟದಿಂದ ಇಳಿದು ಹೋಗುವ ಆಡಿನ ಮಂದೆ.
Kannada BSI Bible 2016
ಇಗೋ, ನನ್ನ ಪ್ರಿಯಳೇ, ನೀನು ಸುಂದರಿಯು! ಇಗೋ, ನೀನು ಸುಂದರಿಯು! ನಿನ್ನ ಮುಸುಕಿನೊಳಗೆ ನಿನಗೆ ಪಾರಿವಾಳದ ಕಣ್ಣುಗ ಳಿವೆ. ನಿನ್ನ ಕೂದಲು ಗಿಲ್ಯಾದಿನ ಪರ್ವತದಲ್ಲಿ ಕಾಣ ಲ್ಪಡುವ ಮೇಕೆ ಮಂದೆಯ ಹಾಗೆ ಇದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ಮುಸುಕಿನೊಳಗಿನ ನಿನ್ನ ನೇತ್ರಗಳು ಪಾರಿವಾಳಗಳು, ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆ.
Kannada Bible (KNCL) BSI 2016
ನಲ್ಲ: ಆಹಾ! ನನ್ನ ಪ್ರಿಯಳೇ, ನೀನೆಷ್ಟು ರೂಪವತಿ! ಆಹಾ! ಎಷ್ಟು ಸುಂದರಿ! ಮುಸುಕಿನೊಳಗಿನ ಕಣ್ಣುಗಳು ಪಾರಿವಾಳಗಳು ನಿನ್ನ ತಲೆಗೂದಲಿನ ನರ್ತನವು ಗಿಲ್ಯಾದ್ ಗುಡ್ಡದಿಂದ ಇಳಿದುಬರುವ ಆಡುಮಂದೆಗೆ ಸಮಾನವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ನನ್ನ ಪ್ರಿಯಳೇ, ನೀನು ಎಷ್ಟು ಸುಂದರಿ! ಆಹಾ, ನೀನು ಎಷ್ಟು ಸುಂದರಿಯು. ನಿನ್ನ ಮುಸುಕಿನೊಳಗಿನ ನಿನ್ನ ಕಣ್ಣುಗಳು ಪಾರಿವಾಳಗಳೇ. ನಿನ್ನ ತಲೆಕೂದಲು ಗಿಲ್ಯಾದಿನ ಪರ್ವತದಿಂದ ಇಳಿದು ಬರುವ ಮೇಕೆ ಮಂದೆಯ ಹಾಗೆ ಇದೆ.